ಚಾಮರಾಜನಗರ:ಜಿಲ್ಲಾಡಳಿತ ನಿರ್ಬಂಧವನ್ನು ಲೆಕ್ಕಿಸದೆ ಕೊರೊನಾ ವೈರಸ್ಗೆ ಹೆದರದೇ ನಗರದಲ್ಲಿ ಅದ್ಧೂರಿಯಾಗಿ ಮಾರಮ್ಮನ ಹಬ್ಬ ಆಚರಿಸಲಾಯಿತು.
ಚಾಮರಾಜನಗರದಲ್ಲಿ ಅದ್ದೂರಿ ಮಾರಿಹಬ್ಬ... ಕೊರೊನಾ ಭೀತಿಯಿಲ್ಲ: ನಿರ್ಬಂಧ ಲೆಕ್ಕಕ್ಕಿಲ್ಲ! - ಚಾಮರಾಜನಗರದಲ್ಲಿ ಅದ್ದೂರಿ ಮಾರಿಹಬ್
ಮಹಾಮಾರಿ ಕೊರೊನಾ ಭೀತಿಯ ನಡುವೆಯು ನಗರದಲ್ಲಿ ಸಾವಿರಅರು ಜನರ ಸಮ್ಮುಖದಲ್ಲಿ ಮಾರಮ್ಮ ದೇವಿ ಜಾತ್ರ ಮಹೋತ್ಸವ ಜರುಗಿತು.
![ಚಾಮರಾಜನಗರದಲ್ಲಿ ಅದ್ದೂರಿ ಮಾರಿಹಬ್ಬ... ಕೊರೊನಾ ಭೀತಿಯಿಲ್ಲ: ನಿರ್ಬಂಧ ಲೆಕ್ಕಕ್ಕಿಲ್ಲ! Marihabba news](https://etvbharatimages.akamaized.net/etvbharat/prod-images/768-512-6435529-thumbnail-3x2-chn.jpg)
ಚಾಮರಾಜನಗರದಲ್ಲಿ ಅದ್ದೂರಿ ಮಾರಿಹಬ್ಬ
ಚಾಮರಾಜನಗರದಲ್ಲಿ ಅದ್ದೂರಿ ಮಾರಿಹಬ್ಬ
ನಗರ ಮಾರಮ್ಮ ಎಂದೇ ಹೆಸರಾದ ಮಾರಮ್ಮ ದೇಗುಲದಲ್ಲಿ ಸಹಸ್ರಾರು ಮಂದಿ ಭಕ್ತರು ಪೂಜೆ ಸಲ್ಲಿಸಿ, ತಂಬಿಟ್ಟಿನ ಆರತಿ ಎತ್ತಿ ಭಕ್ತಿ ಮೆರೆದರು.
ದೇಗುಲ, ಆವರಣವಂತೂ ವಿವಿಧ ಹೂವು, ವಿದ್ಯುತ್ ದೀಪಗಳಿಂದ ನವ ವಧುವಿನಿಂತೆ ಸಿಂಗರಿಸಲಾಗಿತ್ತು. ಜೊತೆಗೆ, ನಗರದ ಚೆನ್ನಿಪುರಮೋಳೆಯಲ್ಲಿ ಯಾವುದೇ ಆತಂಕವಿಲ್ಲದೇ ಕೊಂಡೋತ್ಸವ ನಡೆಯಿತು.