ಕರ್ನಾಟಕ

karnataka

ETV Bharat / state

ಮೃತರ ಕುಟುಂಬಕ್ಕೆ ಸರ್ಕಾರ ಆರ್ಥಿಕ ಸಹಾಯ ಹಸ್ತ ಚಾಚಬೇಕು: ಶಾಸಕ ಎನ್ ಮಹೇಶ್ - ಚಾಮರಾಜನಗರ ಲೇಟೆಸ್ಟ್​ ನ್ಯೂಸ್

ಚಾಮರಾಜನಗರದಲ್ಲಿ‌ ಆಕ್ಸಿಜನ್​ ಸಿಗದೇ 24 ಗಂಟೆಗಳಲ್ಲಿ ಸಾವನ್ನಪ್ಪಿದ 24 ಜನರ ಕುಟುಂಬಗಳಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂದು ಶಾಸಕ ಎನ್.ಮಹೇಶ್ ಆಗ್ರಹಿಸಿದ್ದಾರೆ.

mahesh
mahesh

By

Published : May 3, 2021, 3:20 PM IST

Updated : May 3, 2021, 3:38 PM IST

ಕೊಳ್ಳೇಗಾಲ:ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ ಆಕ್ಸಿಜನ್​ ಸಿಗದೇ 24 ರೋಗಿಗಳು ಸಾವನ್ನಪ್ಪಿದ ಘಟನೆ ಕುರಿತು ಶಾಸಕ‌ ಎನ್. ಮಹೇಶ್ ಮಾತನಾಡಿ, ಪ್ರಾಣವಾಯು ಸಿಗdE ಉಸಿರು ಬಿಟ್ಟ ಘಟನೆ ನಮ್ಮ ಜಿಲ್ಲೆಯಲ್ಲಿ ನಡೆದ ದೊಡ್ಡ ದುರಂತ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಕೊಳ್ಳೇಗಾಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಾಮರಾಜನಗರದ ಆಸ್ಪತ್ರೆಯಲ್ಲಿ ದೊಡ್ಡ ದುರಂತವೇ ನಡೆದಿದ್ದು, ನಾವೆಲ್ಲೋ ಮುಗ್ಧ ಜೀವಿಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ವಿಫಲವಾಗಿದ್ದೇವೆ ಎಂದು ಅನ್ನಿಸುತ್ತಿದೆ ಎಂದು ಹೇಳಿದ್ರು.

ಶಾಸಕ ಎನ್ ಮಹೇಶ್

ಸಾವು ಸಂಭವಿಸಿರುವ ಕುಟುಂಬಗಳಿಗೆ ಸಾಂತ್ವನ ಹೇಳಿದರೆ ಸಾಕಗುವುದಿಲ್ಲ.. ಸಾವಿಗೀಡದ ಶೇ.90 ರಷ್ಟು ಮಂದಿ ಬಡವರಾಗಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಅವರಿಗೆ ಆರ್ಥಿಕ ಸಹಾಯ ಮಾಡಿ, ಜೀವನ ನಡೆಸಲು ಸಹಕಾರಿಯಾಗಬೇಕು, ಅವರನ್ನು ಮೇಲೆತ್ತಬೇಕು ಎಂದು ಒತ್ತಾಯಿಸಿದ್ದಾರೆ.

Last Updated : May 3, 2021, 3:38 PM IST

ABOUT THE AUTHOR

...view details