ಕರ್ನಾಟಕ

karnataka

ETV Bharat / state

ಸರ್ಕಾರ ರಚನೆಯಲ್ಲಿ ಮಹೇಶ್ ಸಹಕಾರ ನೀಡಿದ್ದಾರೆ, ಇದರಲ್ಲಿ ಮುಚ್ಚು ಮರೆ ಇಲ್ಲ: ಬಿ.ವೈ. ವಿಜಯೇಂದ್ರ - B.Y. Vijayendra news

ಸರ್ಕಾರ ರಚನೆ ವೇಳೆ ಎನ್.ಮಹೇಶ್ ಬಿಜೆಪಿಗೆ ಸಹಕಾರ ನೀಡಿದ್ದಾರೆ. ಇದರಲ್ಲಿ ಮುಚ್ಚು ಮರೆಯಿಲ್ಲ. ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುವ ಕುರಿತು ಅವರೇ ಮುಂದೇ ನಿರ್ಧರಿಸಲಿದ್ದಾರೆ ಎಂದು ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.

B.Y. Vijayendra
ಬಿ.ವೈ. ವಿಜಯೇಂದ್ರ

By

Published : Dec 1, 2020, 6:04 PM IST

ಚಾಮರಾಜನಗರ: ಸರ್ಕಾರ ರಚನೆಯಲ್ಲಿ ಬಿಎಸ್ಪಿಯಿಂದ ಉಚ್ಛಾಟಿತರಾಗಿರುವ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಸಹಕಾರ ನೀಡಿರುವ ಕುರಿತು ರಮೇಶ್ ಜಾರಕಿಹೊಳಿ ಬಳಿಕ ಈಗ ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ

ಸರ್ಕಾರ ರಚನೆ ವೇಳೆ ಎನ್.ಮಹೇಶ್ ಬಿಜೆಪಿಗೆ ಸಹಕಾರ ನೀಡಿದ್ದಾರೆ. ಇದರಲ್ಲಿ ಮುಚ್ಚು ಮರೆಯಿಲ್ಲ. ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುವ ಕುರಿತು ಅವರೇ ಮುಂದೇ ನಿರ್ಧರಿಸಲಿದ್ದಾರೆ ಎಂದು ಅಚ್ಚರಿ ಹೇಳಿಕೆ ನೀಡಿದರು.

ಕೇಸರಿ ಪಾಳೇಯಕ್ಕೆ ಎನ್.ಮಹೇಶ್ ಸೇರುವುದಕ್ಕೆ ಪುಷ್ಟಿ ನೀಡುವಂತೆ ಮಹೇಶ್ ಅವರು ಇಂದು ಪ್ರವಾಸಿ ಮಂದಿರದಲ್ಲಿ ವಿಜಯೇಂದ್ರ ಅವರನ್ನು ಬರಮಾಡಿಕೊಂಡು ಸ್ವಾಗತ ಕೋರಿದರು. ಇದಕ್ಕೂ ಮುನ್ನ ಬಿಜೆಪಿ ನಾಯಕರೊಂದಿಗೆ ಹೆಚ್ಚು ಸಮಯ ಕಳೆದರು.

ABOUT THE AUTHOR

...view details