ಗುಂಡ್ಲುಪೇಟೆ:ಅಂಬೇಡ್ಕರ್ ಮನೆ ಮತ್ತು ಗ್ರಂಥಾಲಯ ದ್ವಂಸ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಭಾರತೀಯ ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಬಿವಿಎಸ್ ಮುಖಂಡರು, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ, ಬಿವಿಎಸ್ ನ ಜಿಲ್ಲಾ ಉಪಾಧ್ಯಕ್ಷ ಜೆ. ಸ್ವಾಮಿ ಮಾತನಾಡಿ, ಮಹಾರಾಷ್ಟ್ರದ ದಾದರ್ನಲ್ಲಿರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವಾಸವಾಗಿದ್ದ ಮನೆ ರಾಜಗೃಹ ಮತ್ತು ಅವರ ಗ್ರಂಥಾಲಯವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ಇದು ಪೂರ್ವಗ್ರಹ ಪೀಡಿತವಾಗಿದ್ದು, ಉದ್ದೇಶ ಪೂರ್ವಕವಾದ ಕೃತ್ಯವಾಗಿದೆ ಎಂದು ಗುಡುಗಿದರು.
ಅಂಬೇಡ್ಕರ್ ನಿವಾಸ ಧ್ವಂಸ ಪ್ರಕರಣ ಖಂಡಿಸಿ ಪ್ರತಿಭಟನೆ - Maharastra Ambedkar house demolish issue
ಮಹಾರಾಷ್ಟ್ರದ ದಾದರ್ನಲ್ಲಿರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮನೆ ರಾಜಗೃಹ ಮತ್ತು ಗ್ರಂಥಾಲಯ ಧ್ವಂಸ ಮಾಡಿರುವುದನ್ನು ಖಂಡಿಸಿ ಗುಂಡ್ಲುಪೇಟೆಯಲ್ಲಿ ಭಾರತೀಯ ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆ ನಡೆಸಿದರು.
Ambedkar house demolise protest
ಈ ಕೃತ್ಯದ ಹಿಂದೆ ಇರುವ ಎಲ್ಲರನ್ನೂ ಬಂಧಿಸಿ ರಾಷ್ಟ್ರ ದ್ರೋಹದಡಿ ಪ್ರಕರಣ ದಾಖಲು ಮಾಡಿ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಈ ವೇಳೆ, ಸಂಘಟನೆಯಿಂದ ಉಪ ತಹಶೀಲ್ದಾರ್ ಮೋಹನ್ ಕುಮಾರ್ ಮೂಲಕ ರಾಜ್ಯ ಪಾಲರಿಗೆ ಮನವಿ ಕಳಿಸುವಂತೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ಮಾಧು, ಕೋಟೆಕೇರೆ ಯೋಗೇಶ್, ತಾಲೂಕು ಸಂಚಾಲಕ ಶಿವಬಸವಯ್ಯ, ಹೋರದಹಳ್ಳಿ ಶ್ರೀನಿವಾಸ್ ಪಾಳ್ಯ, ಗುತ್ತಿಗೆದಾರರು ಲೇಖಕರಾದ ನಾಗರಾಜ್, ಗೌರೀಶ್ ಮತ್ತಿತರರು ಹಾಜರಿದ್ದರು.
TAGGED:
protest in Gundlupete