ಕರ್ನಾಟಕ

karnataka

ETV Bharat / state

ಬಂಡೀಪುರದ ಬಳಿಕ ಕೊಯಮತ್ತೂರು ರಸ್ತೆ ರಾತ್ರಿ ಬಂದ್ ಸಾಧ್ಯತೆ: ವರದಿ ಕೇಳಿದ ಮದ್ರಾಸ್ ಹೈಕೋರ್ಟ್

ವನ್ಯಜೀವಿಗಳ ರಕ್ಷಣೆಗಾಗಿ ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿರ್ಬಂಧಿಸಲಿರುವ ಸಾಧಕ - ಬಾಧಕಗಳ ಬಗ್ಗೆ ಹಾಗೂ ಬಂದ್ ಮಾಡುವ ಬಗೆ ಕುರಿತು ಸವಿಸ್ತಾರವಾದ ವರದಿ ಕೊಡುವಂತೆ ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ತಮಿಳುನಾಡು ಲೋಕಪಯೋಗಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

Coimbatore Highway
ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ

By

Published : Jan 28, 2022, 2:10 PM IST

ಚಾಮರಾಜನಗರ: ವನ್ಯಜೀವಿಗಳು ರಸ್ತೆ ಅಪಘಾತದಲ್ಲಿ ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು- ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯನ್ನು ಬಂಡೀಪುರ ಮಾದರಿ ರಾತ್ರಿ ಸಂಚಾರ ಬಂದ್ ಮಾಡುವ ಕಾಲ ಸನ್ನಿಹಿತವಾದಂತಿದೆ.

ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ

ವನ್ಯಜೀವಿಗಳ ರಕ್ಷಣೆಗಾಗಿ ರಾತ್ರಿ ಸಂಚಾರ ನಿರ್ಬಂಧಿಸಲಿರುವ ಸಾಧಕ - ಬಾಧಕಗಳ ಬಗ್ಗೆ ಹಾಗೂ ಬಂದ್ ಮಾಡುವ ಬಗೆ ಕುರಿತು ಸವಿಸ್ತಾರವಾದ ವರದಿ ಕೊಡುವಂತೆ ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ತಮಿಳುನಾಡು ಲೋಕಪಯೋಗಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಬೆಂಗಳೂರು - ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ (NH-958) ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶವನ್ನು ಹಾದುಹೋಗಲಿದ್ದು, 2012 ರಿಂದ 2021 ರವರೆಗೆ ಮೂರು ಚಿರತೆಗಳು ಸೇರಿದಂತೆ 152 ಕಾಡು ಪ್ರಾಣಿಗಳು ಅಪಘಾತದಲ್ಲಿ ಮೃತಪಟ್ಟಿವೆ. ಬಣ್ಣಾರಿ ಮತ್ತು ದಿಂಬಂ ನಡುವೆ ರಾತ್ರಿ 9 ರಿಂದ ಬೆಳಗ್ಗೆ 6 ವರೆಗೆ ರಾತ್ರಿ ಸಂಚಾರ ನಿರ್ಬಂಧಿಸುವ ಕುರಿತು ಫೆ‌‌. 3 ಕ್ಕೆ ವರದಿ ಸಲ್ಲಿಸುವಂತೆ ಎನ್​​ಹೆಚ್ಎ ಪರ ವಕೀಲ ಶ್ರೀನಿವಾಸನ್ ಅವರಿಗೆ ನ್ಯಾಯಾಧೀಶರುಗಳಾದ ವಿ‌.ಭಾರತಿದಾಸನ್ ಮತ್ತು ಎನ್.ಸತೀಶ್ ಕುಮಾರ್ ಅವರ ವಿಭಾಗೀಯ ಪೀಠ ಸೂಚಿಸಿದೆ.

ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ

ಅಮಿಕಸ್ ಕ್ಯೂರಿ ಮತ್ತು ಅರ್ಜಿದಾರರ ಪರ ವಕೀಲರು, ರಾತ್ರಿ ವೇಳೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸುವುದೇ ಅಪಘಾತದಿಂದ ಕಾಡು ಪ್ರಾಣಿಗಳ ಸಾವನ್ನು ತಡೆಯುವ ಏಕೈಕ ಮಾರ್ಗವೆಂದು ಮನವಿ ಮಾಡಿಕೊಂಡಿದ್ದು, ಫೆ.3 ವಾದ - ಪ್ರತಿವಾದ ಈಗ ಕುತೂಹಲಕ್ಕೆ ಎಡೆಮಾಡಿದೆ.

ನಿರ್ಬಂಧ ಆಗಿತ್ತು: ಕೆಲ ವರ್ಷಗಳ ಹಿಂದೆ ಬಣ್ಣಾರಿ ಮತ್ತು ದಿಂಬಂ ನಡುವಿನ ರಸ್ತೆಯನ್ನು ಕೆಲ ತಿಂಗಳುಗಳ ಮಟ್ಟಿಗೆ ನಿರ್ಬಂಧ ಮಾಡಲಾಗಿತ್ತು. ಬಳಿಕ, ತೆರವುಗೊಳಿಸಲಾಗಿತ್ತು. ದಿಂಬಂ ನ ತಿರುವುಗಳಲ್ಲಿ ಚಿರತೆಗಳು ಕಾಣುವುದು ಸರ್ವೇ ಸಾಮಾನ್ಯ. ಜತೆಗೆ ಆಗಾಗ ಹುಲಿಗಳು ಕಾಣುವುದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ:ಉಡುಪಿ ಕಾಲೇಜಿನ ಹಿಜಾಬ್ ವಿವಾದ: ಆನ್​ಲೈನ್ ಕ್ಲಾಸ್​ಗೆ ಒಪ್ಪದ ವಿದ್ಯಾರ್ಥಿನಿಯರು

For All Latest Updates

ABOUT THE AUTHOR

...view details