ಕರ್ನಾಟಕ

karnataka

ETV Bharat / state

ಮಡಹಳ್ಳಿ ಗುಡ್ಡ ಕುಸಿತ ಪ್ರಕರಣ: ಕ್ವಾರಿ ಮಾಲೀಕನ ಬಂಧನ, ಮತ್ತೋರ್ವನಿಗೆ ಶೋಧ - ಮಡಹಳ್ಳಿ ಗುಡ್ಡ ಕುಸಿತದ ಪ್ರಕರಣ: ಕ್ವಾರಿ ಮಾಲೀಕ ಮಹೇಂದ್ರಪ್ಪ ಬಂಧನ, ಮತ್ತೊಬ್ಬನಿಗೆ ಬಲೆ!

ಮಡಹಳ್ಳಿ ಬಿಳಿಕಲ್ಲು ಕ್ವಾರಿ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮಹೇಂದ್ರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಎ2 ಆರೋಪಿ ಹಕೀಂ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

madavalli query collapse case anther one arrest in Chamarajanagar
ಮಡಹಳ್ಳಿ ಗುಡ್ಡ ಕುಸಿತದ ಪ್ರಕರಣ: ಕ್ವಾರಿ ಮಾಲೀಕ ಮಹೇಂದ್ರಪ್ಪ ಬಂಧನ, ಮತ್ತೊಬ್ಬನಿಗೆ ಬಲೆ!

By

Published : Mar 11, 2022, 7:05 PM IST

ಚಾಮರಾಜನಗರ: ಮಡಹಳ್ಳಿ ಬಿಳಿಕಲ್ಲು ಕ್ವಾರಿ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವಾರಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ಗುಡ್ಡ ಕುಸಿತ ಪ್ರಕರಣದಲ್ಲಿ ಮೂರು ಮಂದಿಯ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಲ್ಲಿ ಎ3 ಆರೋಪಿ ಕ್ವಾರಿ ಮ್ಯಾನೇಜರ್ ನವೀದ್ ಖಾನ್ ಎಂಬಾತನನ್ನು ಘಟನೆ ದಿನವೇ ಬಂಧಿಸಲಾಗಿತ್ತು. ನಂತರ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳಾದ ಎ1 ಆರೋಪಿ ಮಹೇಂದ್ರಪ್ಪ ಹಾಗೂ ಎ2 ಆರೋಪಿ ಹಕೀಂ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು.

ಇದೀಗ ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರ ನೇತೃತ್ವದ ತಂಡ ಮಹೇಂದ್ರಪ್ಪನನ್ನು ಬಂಧಿಸಿದೆ. ಎ2 ಆರೋಪಿ ಹಕೀಂ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ: ಓರ್ವ ಮಹಿಳೆ ಬಂಧನ​, ಇಬ್ಬರು ವಿದೇಶಿಯರ ರಕ್ಷಣೆ

ABOUT THE AUTHOR

...view details