ಕರ್ನಾಟಕ

karnataka

ETV Bharat / state

ಹಂಗಳ ಗ್ರಾಮದಲ್ಲಿ ಮದಗಜ ಶೂಟಿಂಗ್​​.. ಅಗಸ್ತ್ಯನನ್ನ ನೋಡಲು ಕಿಕ್ಕಿರಿದ ಅಭಿಮಾನಿಗಳು - ಶ್ರೀ ಮುರುಳಿ ಅಭಿನಯದ ಮದಗಜ

ನಟ ಶ್ರೀಮುರಳಿ ಗ್ರಾಮದೊಳಗೆ ಬೈಕಿನಲ್ಲಿ ಸಂಚಾರ ಮಾಡುವ ಮತ್ತು ಎದುರಾಳಿಗಳು ನಟನನ್ನ ಹಿಂಬಾಲಿಸುವ ದೃಶ್ಯ ಹಂಗಳ ಗ್ರಾಮದಲ್ಲಿ ಚಿತ್ರೀಕರಣ ಮಾಡಲಾಯಿತು..

Madagaja shooting at Hangla village
ಹಂಗಳ ಗ್ರಾಮದಲ್ಲಿ ಮದಗಜ ಶೂಟಿಂಗ್​​

By

Published : Oct 3, 2020, 8:20 PM IST

ಗುಂಡ್ಲುಪೇಟೆ: ನಟ ಶ್ರೀಮುರುಳಿ ಅಭಿನಯದ ಮದಗಜ ಸಿನಿಮಾದ ಚಿತ್ರೀಕರಣ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆಯಿತು. ಹಳ್ಳಿ ವಾತಾವರಣ ಚಿತ್ರೀಕರಣಕ್ಕೆ ಪೂರಕವಾದ್ದರಿಂದ ಈ ಸ್ಥಳದಲ್ಲಿ ಶೂಟಿಂಗ್​​ ಮಾಡಲಾಗುತ್ತಿದೆ.

ಮಹೇಶ್ ಕುಮಾರ್ ನಿರ್ದೇಶನದ ಉಮಾಪತಿ ಬ್ಯಾನರ್​​ನಲ್ಲಿ ನಿರ್ಮಾಣವಾಗುತ್ತಿರುವ ಮದಗಜ ಚಿತ್ರದ ಶೇ.25ರಷ್ಟು ಶೂಟಿಂಗ್‌ ವಾರಣಾಸಿಯಲ್ಲಿ ಮುಗಿದಿದೆ.

ಹಂಗಳ ಗ್ರಾಮದಲ್ಲಿ ಮದಗಜ ಶೂಟಿಂಗ್​​

ನಟ ಶ್ರೀಮುರಳಿ ಗ್ರಾಮದೊಳಗೆ ಬೈಕಿನಲ್ಲಿ ಸಂಚಾರ ಮಾಡುವ ಮತ್ತು ಎದುರಾಳಿಗಳು ನಟನನ್ನ ಹಿಂಬಾಲಿಸುವ ದೃಶ್ಯ ಹಂಗಳ ಗ್ರಾಮದಲ್ಲಿ ಚಿತ್ರೀಕರಣ ಮಾಡಲಾಯಿತು. ಈ ವೇಳೆ ಸಾಕಷ್ಟು ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ನಿಂತಿದ್ದು, ಎಲ್ಲರಿಗೂ ಶ್ರೀಮುರುಳಿ ವಿಷ್ ಮಾಡಿದರು.

ABOUT THE AUTHOR

...view details