ಕರ್ನಾಟಕ

karnataka

ETV Bharat / state

ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಲಾರಿ: ಚಾಲಕ ಸ್ಥಳದಲ್ಲೇ ಸಾವು - Lorry which crashed into a ditch

ಚಾಲಕನ ನಿಯಂತ್ರಣ ತಪ್ಪಿ ಬೆಂಗಳೂರಿನ ಯಶವಂತಪುರದಿಂದ ಮೆಟ್ಟುಪಾಳ್ಯಗೆ ಹೊರಟಿದ್ದ ಲಾರಿಯೊಂದು ಮುಡಿಗುಂಡ ರಸ್ತೆ ಮಾರ್ಗದಲ್ಲಿ ಹಳ್ಳಕ್ಕೆ ಉರುಳಿದೆ. ಪರಿಣಾಮ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

Kollegal
ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಲಾರಿ: ಸ್ಥಳದಲ್ಲಿಯೇ ಚಾಲಕ ಸಾವು

By

Published : Dec 16, 2020, 1:50 PM IST

ಕೊಳ್ಳೇಗಾಲ(ಚಾಮರಾಜನಗರ): ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಲಾರಿಯೊಂದು ಹಳ್ಳಕ್ಕೆ ಉರುಳಿದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತಾಲೂಕಿನ ಮುಡಿಗುಂಡ ಗ್ರಾಮದ ಸೇತುವೆ ಬಳಿ ನಡೆದಿದೆ.

ತಮಿಳುನಾಡಿನ ಊಟಿಯ ನಿವಾಸಿ ಕಾರ್ತಿಕ್ (28) ಮೃತ ವ್ಯಕ್ತಿ. ಈತ ಬೆಂಗಳೂರಿನ ಯಶವಂತಪುರದಿಂದ ಲಾರಿಯಲ್ಲಿ ಆಲೂಗಡ್ಡೆ ತುಂಬಿಕೊಂಡು ಬರುತ್ತಿದ್ದ ವೇಳೆ ತಾಲೂಕಿನ ಮುಡಿಗುಂಡ ಸೇತುವೆ ಬಳಿ ಈ ಅವಘಡ ಸಂಭವಿಸಿದೆ. ಮೃತದೇಹವನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಸ್ಥಳಕ್ಕೆ ಡಿವೈಎಸ್​ಪಿ ನಾಗರಾಜು, ಸಿಪಿಐ ಶ್ರೀಕಾಂತ್ ಭೇಟಿ ನೀಡಿ ಪರಿಶೀಲಿಸಿದರು.

ABOUT THE AUTHOR

...view details