ಚಾಮರಾಜನಗರ:ಬೆಂಗಳೂರು- ಕೊಯಮತ್ತೂರು ರಾಷ್ಟೀಯ ಹೆದ್ದಾರಿ ನಡುವಿನ ದಿಂಬಂನಲ್ಲಿ ಸರಕು ತುಂಬಿದ ಲಾರಿಯೊಂದು ತಿರುವಿನಲ್ಲಿ ಸಿಲುಕಿದ ಪರಿಣಾಮ 5 ಗಂಟೆಗಳ ಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯವಾಗಿದ್ದು ಇಂದು ಬೆಳಗ್ಗೆ ನಡೆದಿದೆ.
ದಿಂಬಂ ತಿರುವಿನಲ್ಲಿ ಸಿಲುಕಿದ ಲಾರಿ: ತಮಿಳುನಾಡು- ಕರ್ನಾಟಕ ಹೆದ್ದಾರಿ 5 ತಾಸು ಬಂದ್ - ಚಾಮರಾಜನಗರ ಸುದ್ದಿ
ಬೆಂಗಳೂರು- ಕೊಯಮತ್ತೂರು ರಾಷ್ಟೀಯ ಹೆದ್ದಾರಿ ನಡುವಿನ ದಿಂಬಂನಲ್ಲಿ ಲಾರಿಯೊಂದು ತಿರುವಿನಲ್ಲಿ ಸಿಲುಕಿದ ಪರಿಣಾಮ 5 ತಾಸು ಬಂದ್ ಆಗಿದ್ದ ಘಟನೆ ನಡೆದಿದೆ.
ತಿರುವಿನಲ್ಲಿ ಸಿಲುಕಿದ ಲಾರಿ
ಬೆಳಗಿನ ಜಾವ 5ರ ಸುಮಾರಿಗೆ ಸರಕು ತುಂಬಿದ ರಾಜಸ್ಥಾನದ ಲಾರಿಯೊಂದು 9ನೇ ತಿರುವಿನಲ್ಲಿ ನಿಂತಿದ್ದರಿಂದ ಬೇರೆ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ತಮಿಳುನಾಡು ಪೊಲೀಸರು ಹರಸಾಹಸಪಟ್ಟು 10.20ರ ಸುಮಾರಿಗೆ ಲಾರಿಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇನ್ನು, ಅದೃಷ್ಟವಶಾತ್ ಲಾರಿಯು ಪ್ರಪಾತಕ್ಕೆ ಬೀಳದೇ ಭಾರಿ ಅನಾಹುತ ತಪ್ಪಿದೆ.