ಚಾಮರಾಜನಗರ:ನಿಯಂತ್ರಣ ತಪ್ಪಿ ಲಾರಿಯೊಂದು ಹೋಟೆಲ್ ಮತ್ತು ಬೇಕರಿಗೆ ನುಗ್ಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ರಾಘವಾಪುರ ಸಮೀಪ ನಡೆದಿದೆ.
ಹೋಟೆಲ್, ಬೇಕರಿಗೆ ನುಗ್ಗಿದ ಲಾರಿ: ಲಕ್ಷಾಂತರ ಮೌಲ್ಯದ ವಸ್ತುಗಳು ಚೆಲ್ಲಾಪಿಲ್ಲಿ - Chamarajanagara latest news
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ರಾಘವಾಪುರದಲ್ಲಿ ನಿಯಂತ್ರಣ ತಪ್ಪಿ ಲಾರಿ ಹೋಟೆಲ್ ಹಾಗೂ ಬೇಕರಿಗೆ ನುಗ್ಗಿದೆ. ಪರಿಣಾಮ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿವೆ.

Lorry rushing to the hotel bakery
ಆಂಧ್ರಪ್ರದೇಶದಿಂದ ಅಕ್ಕಿ ಸಾಗಾಣೆ ಮಾಡುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿದ್ದ ಕೆಪಿಟಿ ಹೋಟೆಲ್, ಬೇಕರಿಗೆ ನುಗ್ಗಿದೆ. ಪರಿಣಾಮ ಕಟ್ಟಡಗಳು ಸಂಪೂರ್ಣ ನೆಲಕಚ್ಚಿ 10 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಅಷ್ಟೇ ಅಲ್ಲದೇ ಹೋಟೆಲ್ ಮುಂದೆ ನಿಲ್ಲಿಸಿದ್ದ ಬೈಕ್, ಜಮೀನಿನ ಮೇಲೂ ಲಾರಿ ಹರಿದು ಹಾನಿಯಾಗಿರುವುದಾಗಿ ಜಮೀನು ಹಾಗೂ ಬೈಕ್ ಮಾಲೀಕರು ದೂರಿದ್ದಾರೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿದ್ದು, ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಿಂದ 18 ಲಕ್ಷ ರೂ.ನಷ್ಟು ವಸ್ತುಗಳು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.