ಚಾಮರಾಜನಗರ: ಕಬ್ಬು ತುಂಬಿದ ಲಾರಿಯೊಂದು ಪಲ್ಟಿಯಾಗಿರುವ ಘಟನೆ ತಮಿಳುನಾಡಿನ ದಿಂಬಂ 23ನೇ ತಿರುವಿನಲ್ಲಿ ನಡೆದಿದ್ದು, ಅದೃಷ್ಟವಶಾತ್ ಚಾಲಕ ಹಾಗೂ ಕ್ಲೀನರ್ ಕೆಳಗಿಳಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಡು ರಸ್ತೆಯಲ್ಲಿ ಕಬ್ಬು ತುಂಬಿದ್ದ ಲಾರಿ ಪಲ್ಟಿ... ವಿಡಿಯೋ - ಭಾರೀ ತೂಕಕ್ಕೆ ಸ್ಟೇರಿಂಗ್ ತಿರುಗದೇ ಜಾಮ್
ತಾಳವಾಡಿಯಿಂದ ಸತ್ಯಮಂಗಲಂಗೆ ಕಬ್ಬು ತುಂಬಿಕೊಂಡು ತೆರಳುತ್ತಿದ್ದ ವೇಳೆ ದಿಂಬಂನ 23ನೇ ತಿರುವಿನಲ್ಲಿ ಭಾರೀ ತೂಕಕ್ಕೆ ಸ್ಟೇರಿಂಗ್ ತಿರುಗದೇ ಜಾಮ್ ಆದ ಕಾರಣ ಚಾಲಕ ಮತ್ತು ಕ್ಲೀನರ್ ಲಾರಿಯಿಂದ ಕೆಳಗಿಳಿದಿದ್ದಾರೆ. ನೋಡನೋಡುತ್ತಿದ್ದಂತೆ ಲಾರಿ ಪಲ್ಟಿಯಾಗಿ ಕಬ್ಬು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದೆ.
ಕಬ್ಬು ತುಂಬಿದ ಲಾರಿ

ಈ ವಿಡಿಯೋವನ್ನು ಸತ್ಯಮಂಗಲಂನಿಂದ ಬರುತ್ತಿದ್ದ ಬೈಕ್ ಸವಾರರೊಬ್ಬರು ಸೆರೆ ಹಿಡಿದು ಈಟಿವಿ ಭಾರತಕ್ಕೆ ನೀಡಿದ್ದಾರೆ. ಸ್ಥಳಕ್ಕೆ ಕ್ರೇನ್ ತೆರಳಿದೆ ಎಂದು ಅವರು ತಿಳಿಸಿದ್ದಾರೆ.