ಚಾಮರಾಜನಗರ:ನಿಯಂತ್ರಣ ತಪ್ಪಿ ಲಾರಿಯೊಂದು ಚಲಿಸುತ್ತಿದ್ದ ಬೈಕ್ ಮೇಲೆ ಪಲ್ಟಿಯಾಗಿ ಮೂವರು ಮೃತಪಟ್ಟಿರುವ ಘಟನೆ ಬಂಡೀಪುರ ಸಮೀಪದ ಮೇಲುಕಾಮನಹಳ್ಳಿ ಬಳಿ ನಡೆದಿದೆ.
ಬ್ರಿಡ್ಜ್ನಿಂದ ಕೆಳಗುರುಳಿದ ಲಾರಿ: ಇಬ್ಬರು ಬೈಕ್ ಸವಾರರು ಸೇರಿ ಮೂವರ ದುರ್ಮರಣ - latest chamrajnagara accident news
ಪ್ಲೈವುಡ್ ಶೀಟ್ಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಬೈಕ್ ಮೇಲೆ ಬಿದ್ದ ಪರಿಣಾಮ ಲಾರಿ ಚಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
![ಬ್ರಿಡ್ಜ್ನಿಂದ ಕೆಳಗುರುಳಿದ ಲಾರಿ: ಇಬ್ಬರು ಬೈಕ್ ಸವಾರರು ಸೇರಿ ಮೂವರ ದುರ್ಮರಣ](https://etvbharatimages.akamaized.net/etvbharat/prod-images/768-512-5121957-thumbnail-3x2-cnr.jpg)
ಚಲಿಸುತ್ತಿದ್ದ ಬೈಕ್ ಮೇಲೆ ಲಾರಿ ಪಲ್ಟಿ: ಚಾಲಕ ಸೇರಿ ಸವಾರರಿಬ್ಬರು ಸಾವು
ಬೈಕ್ ಸವಾರರಾದ ಶಿವಪುರದ ಶಿವಪ್ಪ, ಕಾಳಪ್ಪ ಹಾಗೂ ಲಾರಿ ಚಾಲಕ ಈಶ್ಚರಪ್ಪ ಮೃತಪಟ್ಟ ದುರ್ದೈವಿಗಳು. ಫ್ಲೈವುಡ್ ಶೀಟ್ಗಳನ್ನು ಕೊಂಡೊಯ್ಯುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದರಿಂದ ಈ ಅವಘಡ ಸಂಭವಿಸಿದೆ. ಲಾರಿ ಬ್ರಿಡ್ಜ್ ಕೆಳಗೆ ಬಿದ್ದು ನಜ್ಜುಗುಜ್ಜಾಗಿದ್ದು ಚಾಲಕನ ದೇಹವನ್ನು ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಸ್ಥಳಕ್ಕೆ ಎಸ್ಪಿ, ಡಿವೈಎಸ್ಪಿ ಭೇಟಿ ನೀಡಿದ್ದು ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Nov 20, 2019, 3:05 PM IST