ಚಾಮರಾಜನಗರ: ಗ್ರಾನೈಟ್ ತುಂಬಿದ್ದ ಲಾರಿಯೊಂದು ದಿಂಬಂ ತಿರುವಿನಲ್ಲಿ ಪಲ್ಟಿಯಾಗಿ ಬರೋಬ್ಬರಿ 11 ತಾಸು ಟ್ರಾಫಿಕ್ ಕಿರಿಕಿರಿ ಉಂಟಾದ ಘಟನೆ ಇಂದು ನಡೆದಿದೆ.
ಓದಿ: ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ.. ಆರೋಪಿಯ ಜತೆಗೆ ಹಾರ್ಡ್‌ಡಿಸ್ಕ್, ಪೆನ್ ಡ್ರೈವ್ ಎಸ್ಐಟಿ ವಶಕ್ಕೆ

ಚಾಮರಾಜನಗರದಿಂದ ಕರಿಕಲ್ಲುಗಳನ್ನು ತುಂಬಿಕೊಂಡು ಸೇಲಂಗೆ ಹೋಗುತ್ತಿದ್ದ ಲಾರಿ ದಿಂಬಂನ 13ನೇ ತಿರುವಿನಲ್ಲಿ ಬೆಳಗ್ಗೆ 6.30 ರಲ್ಲಿ ಪಲ್ಟಿಯಾಗಿದೆ. ಲಾರಿ ಮೇಲೆತ್ತಲು ಬಂದ ಕ್ರೇನ್ ಮೇಲೂ ಕೂಡ ಲಾರಿ ಪಲ್ಟಿಯಾಗಿದ್ದರಿಂದ ಸಂಚಾರಕ್ಕೆ ಅಡಚಣೆಯಾಗಿ ಸಂಜೆ 6 ತನಕ ಕಾರ್ಯಾಚರಣೆ ನಡೆಸಿ ಲಾರಿಯನ್ನು ತೆರವುಗೊಳಿಸಿದ್ದಾರೆ.
ಲಾರಿ ಓವರ್ ಲೋಡ್ ಆಗಿದ್ದರಿಂದ ಘಟನೆ ನಡೆದಿದೆ ಎನ್ನಲಾಗಿದ್ದು, ಚಾಮರಾಜನಗರದಿಂದ ಈ ವಾಹನ ತೆರಳುತಿತ್ತು ಎಂದು ತಿಳಿದು ಬಂದಿದೆ. ಪೊಲೀಸ್ ಚೆಕ್ ಪೋಸ್ಟ್, ಗಣಿ ಇಲಾಖೆಯ ಚೆಕ್ ಪೋಸ್ಟ್ ಗಳನ್ನು ದಾಟಿಯೇ ಈ ಲಾರಿ ಬಂದಿದ್ದು, ಓವರ್ ಲೋಡ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ.