ಕರ್ನಾಟಕ

karnataka

ETV Bharat / state

ಚಾಮರಾಜನಗರ: ಲೋಕಾಯುಕ್ತ ಬಲೆಗೆ ಬಿದ್ದ ಕೃಷಿ ಇಲಾಖೆ ಅಧಿಕಾರಿಗಳು - Lokayukta police arrest two Agriculture officers

ಕಂಪನಿಯ ಬಿಲ್​ ಮಂಜೂರು ಮಾಡದೆ 2.5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟ ಕೃಷಿ ಇಲಾಖೆ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ.

Etv Bharatlokayukta-police-arrest-two-agriculture-officers-in-chamarajanagara
ಚಾಮರಾಜನಗರ: ಲೋಕಾಯುಕ್ತ ಬಲೆಗೆ ಬಿದ್ದ ಕೃಷಿ ಇಲಾಖೆ ಅಧಿಕಾರಿಗಳು.

By

Published : Apr 6, 2023, 6:10 AM IST

ಚಾಮರಾಜನಗರ: ಕಂಪನಿಯ ಬಿಲ್​ ಮಂಜೂರು ಮಾಡದೆ 70 ರಿಂದ 80 ಫೈಲ್ ಗಳನ್ನು ಪೆಂಡಿಂಗ್ ಇಟ್ಟುಕೊಂಡು ಲಂಚಕ್ಕೆ ಬೇಡಿಕೆ ಇಟ್ಟ ಕೃಷಿ ಇಲಾಖೆ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್‍ಕುಮಾರ್, ತಾಂತ್ರಿಕ ಮತ್ತು ಕೃಷಿ ಅಧಿಕಾರಿ ಸತೀಶ್ ಹಾಗೂ ಡಿ.ಗ್ರೂಪ್ ನೌಕರ ಅರುಣ್ ಲೋಕಾಯುಕ್ತಕ್ಕೆ ಸಿಕ್ಕಿಬಿದಿದ್ದಾರೆ. ಗುಂಡ್ಲುಪೇಟೆ ಪಟ್ಟಣದಲ್ಲಿರುವ ಎಸ್.ಆರ್.ಟ್ರೇಡರ್ಸ್ ಎಂಬ ಕಂಪನಿಯ ಬಿಲ್​ಗಳನ್ನು ಮಂಜೂರು ಮಾಡದೇ ಪೆಂಡಿಂಗ್ ಇಟ್ಟಿದ್ದ ಈ ಇಬ್ಬರು ಅಧಿಕಾರಿಗಳು 2.5 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

ಈ ಸಂಬಂಧ ಟ್ರೇಡರ್ಸ್ ಮಾಲೀಕ ಕುಮಾರಸ್ವಾಮಿ, ಕೃಷಿ ಅಧಿಕಾರಿ 1.5 ಲಕ್ಷ ಮತ್ತು ಸಹಾಯಕ ನಿರ್ದೇಶಕ 1 ಲಕ್ಷ ಲಂಚವನ್ನು ಕೇಳುತ್ತಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರು ಪಡೆದು ಲೋಕಾಯುಕ್ತ ಪೊಲೀಸರು ಕಾರ್ಯಚರಣೆ ನಡೆಸಿ ಎರಡೂವರೆ ಲಕ್ಷ ರೂ ಲಂಚ ಪಡೆಯುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

ಕುರಿಗಾಹಿ ಜೀವನ ಕಸಿದ ಮಳೆ: ಸಿಡಿಲಿನ ಬಡಿದು 12 ಮೇಕೆಗಳು ಅಸುನೀಗಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಚನ್ನೂರು ಎಂಬ ಗ್ರಾಮದಲ್ಲಿ ನಡೆದಿದೆ. ಚನ್ನೂರು ಗ್ರಾಮದ ವೆಂಕಟಭೋವಿ ಎಂವವರಿಗೆ ಸೇರಿದ್ದ 12 ಮೇಕೆಗಳು ಮಳೆ ಬಂದಿದ್ದರಿಂದ ಮರದ ಕೆಳಗೆ ನಿಂತಿದ್ದವು. ಈ ವೇಳೆ ಸಿಡಿಲು ಬಡಿದು ಮೇಕೆಗಳು ಮೃತಪಟ್ಟಿವೆ. ಇದರಿಂದ ವಿಶೇಷ ಚೇತನರಾದ ವೆಂಕಟಭೋವಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಇದನ್ನೂ ಓದಿ:ಸಿಲಿಂಡರ್​ ಸ್ಫೋಟ: ಕಲಬುರಗಿಯಲ್ಲಿ ಮನೆ ಬೆಂಕಿಗಾಹುತಿ

ABOUT THE AUTHOR

...view details