ಕರ್ನಾಟಕ

karnataka

ETV Bharat / state

ಲಾಕ್‌ಡೌನ್ ಉಲ್ಲಂಘನೆ ಆರೋಪ.. ಸಚಿವ ಸುರೇಶ್ ಕುಮಾರ್, ಶಾಸಕ ನಿರಂಜನ್‌ಕುಮಾರ್ ವಿರುದ್ಧ ದೂರು.. - ಸುರೇಶ್ ಕುಮಾರ್​ ವಿರುದ್ಧ ದೂರು

ಆಹಾರ ಧಾನ್ಯದ ಕಿಟ್ ನೀಡುವ ನೆಪದಲ್ಲಿ ರಾಜಕೀಯ ಪ್ರಚಾರ ನಡೆಸುತ್ತಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ, ಸುರಕ್ಷತಾ ಕ್ರಮ ಅನುಸರಿಸದೆ ಲಾಕ್‌ಡೌನ್ ಹಾಗೂ 144 ಸೆಕ್ಷನ್ ಉಲ್ಲಂಘಿಸುತ್ತಿದ್ದಾರೆ. ಕೊರೊನಾ ಸೋಂಕು ಹರಡಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

lock-down-rules-break-complaint-against-minister-and-mla
ಸಚಿವ ಸುರೇಶ್ ಕುಮಾರ್, ಶಾಸಕ ನಿರಂಜನ ಕುಮಾರ್ ವಿರುದ್ಧ ದೂರು

By

Published : Apr 12, 2020, 11:33 AM IST

ಚಾಮರಾಜನಗರ :ಸಚಿವ ಸುರೇಶ್ ಕುಮಾರ್ ಹಾಗೂ ಗುಂಡ್ಲುಪೇಟೆ ಶಾಸಕ ನಿರಂಜನಕುಮಾರ್ ಲಾಕ್‌ಡೌನ್ ನಿಯಮ ಉಲ್ಲಂಘಿಸುತ್ತಿದ್ದಾರೆಂದು ಎಂದು ಆರೋಪಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಸಚಿವರು ಮತ್ತು ಶಾಸಕರು ಕ್ಷೇತ್ರ ಪ್ರವಾಸದ ವೇಳೆ ನೂರಾರು ಕಾರ್ಯಕರ್ತರನ್ನು ದಂಟು ಕಟ್ಟಿಕೊಂಡು ತಿರುಗಿ ಲಾಕ್‌ಡೌನ್ ಉಲ್ಲಂಘಿಸುತ್ತಿದ್ದಾರೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಹಾಗೂ ಕಾರ್ಯಕರ್ತರು ದೂರಿದ್ದಾರೆ.

ಸಚಿವ ಸುರೇಶ್‌ಕುಮಾರ್, ಶಾಸಕ ನಿರಂಜನ್‌ಕುಮಾರ್‌ ವಿರುದ್ಧ ದೂರು..

ಆಹಾರ ಧಾನ್ಯದ ಕಿಟ್ ನೀಡುವ ನೆಪದಲ್ಲಿ ರಾಜಕೀಯ ಪ್ರಚಾರ ನಡೆಸುತ್ತಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ, ಸುರಕ್ಷತಾ ಕ್ರಮ ಅನುಸರಿಸದೆ ಲಾಕ್‌ಡೌನ್ ಹಾಗೂ 144 ಸೆಕ್ಷನ್ ಉಲ್ಲಂಘಿಸುತ್ತಿದ್ದಾರೆ. ಕೊರೊನಾ ಸೋಂಕು ಹರಡಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ರೈತ ಮುಖಂಡನ ವಿರುದ್ಧ ಎಫ್ಐಆರ್ :ಕಳೆದ ಕೆಲವು ದಿನಗಳ ಹಿಂದೆ ರೈತ ಸಂಘದ ಸಂಚಾಲಕ ಕಡಬೂರು ಮಂಜುನಾಥ್ ಹಾಗೂ ಮತ್ತಿತರರು ಮೂಳೆಹೊಳೆ ಗಡಿಯನ್ನು ಸಂಪೂರ್ಣ ಬಂದ್ ಮಾಡುವಂತೆ ಒತ್ತಾಯಿಸಿ ಸುದ್ದಿಗೋಷ್ಠಿ ನಡೆಸಿದ್ದರು‌. ಲಾಕ್‌ಡೌನ್ ಉಲ್ಲಂಘಿಸಿ ಗುಂಪು ಸೇರಿ ಸುದ್ದಿಗೋಷ್ಠಿ ನಡೆಸಿದ್ದಾರೆಂದು ಗುಂಡ್ಲುಪೇಟೆ ಪೊಲೀಸರು ಕಡಬೂರು ಮಂಜುನಾಥ್ ವಿರುದ್ಧ ಶನಿವಾರ ಎಫ್ಐಆರ್ ದಾಖಲಿಸಿದ್ದಾರೆ.

ABOUT THE AUTHOR

...view details