ಕೊಳ್ಳೇಗಾಲ :ಕೊರೊನಾ ತಡೆಗೆ ಭಾನುವಾರ ಜಾರಿಯಲ್ಲಿದ್ದ ಸಂಪೂರ್ಣ ಲಾಕ್ಡೌನ್ ಮಾರ್ಗಸೂಚಿಯನ್ನು ಪಟ್ಟಣದಲ್ಲಿ ಕೆಲವರು ಉಲ್ಲಂಘಿಸಿದ್ದಾರೆ.
ಸಂಪೂರ್ಣ ಲಾಕ್ಡೌನ್ ಮಧ್ಯೆ ಕೊಳ್ಳೇಗಾಲದಲ್ಲಿ ಅನಗತ್ಯ ಸಂಚಾರ - ಚಾಮರಾಜನಗರದಲ್ಲಿ ಕೊರೊನಾ ಪ್ರಕರಣಗಳು
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಭಾನುವಾರದ ಸಂಪೂರ್ಣ ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿ ಜನತೆ ಅನಾವಶ್ಯಕವಾಗಿ ಓಡಾಡುತ್ತಿರುವ ದೃಶ್ಯ ಕಂಡು ಬಂದಿದೆ.
ಕೊಳ್ಳೇಗಾಲದಲ್ಲಿ ಲಾಕ್ಡೌನ್ ಇದ್ರೂ ಅನಗತ್ಯ ಸಂಚಾರಕ್ಕಿಲ್ಲ ಕಡಿವಾಣ..!
ಬೆಳಗ್ಗೆಯಿಂದ ರಸ್ತೆಗಿಳಿದ ಜನ ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದರು. ಮಧ್ಯಾಹ್ನ ಆಗುತಿದ್ದಂತೆ ವ್ಯಾಪಾರ ವಹಿವಾಟಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ, ಕೆಲವು ಜನರ ಅನಾಗತ್ಯವಾಗಿ ಓಡಾಡಿದ್ದು ಕಂಡುಬಂದಿದೆ. ಗಸ್ತಿನಲ್ಲಿದ್ದ ಪೊಲೀಸರನ್ನು ನೋಡುತ್ತಿದ್ದಂತೆ ಸಾರ್ವಜನಿಕರು ಓಡಿಹೋಗುತ್ತಿದದ್ದು ಸಾಮಾನ್ಯವಾಗಿತ್ತು.
ಆಸ್ಪತ್ರೆ, ಮೆಡಿಕಲ್, ಪೆಟ್ರೋಲ್ ಬಂಕ್, ಮಾಂಸದ ಅಂಗಡಿಗಳು ಎಂದಿನಂತೆ ತೆರೆದಿದ್ದವು. ಇತರೆ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.