ಕರ್ನಾಟಕ

karnataka

ETV Bharat / state

ಲಾಕ್​​​ಡೌನ್ ಎಫೆಕ್ಟ್​: ಹಳ್ಳಿಗಳಲ್ಲಿ ಮನೆ ಮನೆಗೆ ತರಕಾರಿ, ನಿರ್ಗತಿಕರಿಗೆ ಊಟ-ವಸತಿ - chamarajanagar

ಲಾಕ್​​ಡೌನ್ ಹಿನ್ನೆಲೆ ಅಗತ್ಯ ತರಕಾರಿಗಳನ್ನು ಹಾಪ್ ಕಾಮ್ಸ್ ವಾಹನದ ಮೂಲಕ ಪ್ರತಿ ಗ್ರಾಮ ಪಂಚಾಯ್ತಿಗೂ ರವಾನಿಸುವುದಕ್ಕೆ ಡಿಸಿ ಡಾ. ಎಂ.ಆರ್.ರವಿ ಚಾಲನೆ ನೀಡಿದರು. ಮಾರುಕಟ್ಟೆ ಧಾರಣೆಯಂತೆ ಸೂಕ್ತ ಬೆಲೆಯಲ್ಲಿ ತರಕಾರಿ ವಿತರಿಸಲಿದ್ದಾರೆ.

vegitable supply to houses
ಲಾಕ್ ಡೌನ್ ಎಫೆಕ್ಟ್​: ಹಳ್ಳಿಯ ಮನೆ ಮನೆಗೆ ತರಕಾರಿ

By

Published : Mar 27, 2020, 10:06 PM IST

ಚಾಮರಾಜನಗರ:ಕೋವಿಡ್ 19 ಮುನ್ನೆಚ್ಚರಿಕೆ ಕ್ರಮವಾಗಿ ದೇಶವೇ ಲಾಕ್​​​​ಡೌನ್ ಆಗಿರುವುದರಿಂದ ಅಗತ್ಯ ತರಕಾರಿಗಳನ್ನು ಹಾಪ್ ಕಾಮ್ಸ್ ವಾಹನದ ಮೂಲಕ ಪ್ರತಿ ಗ್ರಾಮ ಪಂಚಾಯ್ತಿಗೂ ರವಾನಿಸುವುದಕ್ಕೆ ಡಿಸಿ ಡಾ. ಎಂ.ಆರ್.ರವಿ ಚಾಲನೆ ನೀಡಿದರು.

ರೈತರಿಂದಲೇ ನೇರವಾಗಿ ಖರೀದಿಸಿ ಸಂಚಾರಿ ವಾಹನಗಳ ಮೂಲಕ ಜಿಲ್ಲೆಯ 139 ಗ್ರಾಮ ಪಂಚಾಯ್ತಿಗಳಿಗೆ ಪ್ರಾಥಮಿಕವಾಗಿ ವಿತರಿಸಲಿದ್ದು, ಬಳಿಕ ತಾಲೂಕಿಗೆ ಒಂದು ವಾಹನದಂತೆ ಎಲ್ಲಾ ಗ್ರಾಮಗಳಿಗೂ ಈ ತರಕಾರಿ ಸಂಚಾರಿ ವಾಹನ ತೆರಳಲಿದೆ.

ಮಾರುಕಟ್ಟೆ ಧಾರಣೆಯಂತೆ ಸೂಕ್ತ ಬೆಲೆಯಲ್ಲಿ ತರಕಾರಿ ವಿತರಿಸಲಿದ್ದು, ಮುಖ್ಯವಾಗಿ ಆಲೂಗೆಡ್ಡೆ, ಮೆಣಸಿಕಾಯಿ, ಟೊಮ್ಯಾಟೊ, ಈರುಳ್ಳಿ, ಬಾಳೆಹಣ್ಣಿಗೆ ಹೆಚ್ಚು ಪ್ರಾಧನ್ಯತೆ ನೀಡಲಾಗಿದೆ.

ಇನ್ನು, ಲಾಕ್​​ಡೌನ್ ಆಗಿರುವುದರಿಂದ ನಿರ್ಗತಿಕರು ಊಟಕ್ಕೂ ಪರದಾಡುತ್ತಿದ್ದನ್ನು ಗಮನಿಸಿದ ನಗರಸಭೆಯು ಸಿಡಿಎಸ್ ಭವನದಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರ ಸ್ಥಾಪಿಸಿದ್ದು, ಮೂರು ಬಾರಿ ಊಟ, ಕಾಫಿ-ಟೀ, ಮಲಗಲು ಹಾಸಿಗೆ, ಸಮಯ ಕಳೆಯಲು ಟಿವಿ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ 17 ಮಂದಿ ನಿರ್ಗತಿಕರನ್ನು ಗುರುತಿಸಿ ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕರೆತರಲು ಯೋಜನೆ ಹಾಕಿಕೊಂಡಿದೆ.

ABOUT THE AUTHOR

...view details