ಕರ್ನಾಟಕ

karnataka

ETV Bharat / state

ನಿರ್ಗತಿಕ ಕುಟುಂಬಕ್ಕೆ ಲಾಕ್​ಡೌನ್​ ಬರೆ: ಮಂಕಾಗಿದೆ ಮಕ್ಕಳ ಭವಿಷ್ಯ

ಎರಡು ವರ್ಷಗಳ ಹಿಂದೆ ಮೈಸೂರಿನಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮಕ್ಕೆ ಕೂಲಿ ಅರಸಿ ಬಂದ ಕುಟುಂಬಕ್ಕೆ ಲಾಕ್​ಡೌನ್​ನಿಂದಾಗಿ ಸಂಕಷ್ಟ ಎದುರಾಗಿದೆ. ಸರ್ಕಾರ ತಮ್ಮ ನೆರವಿಗೆ ಧಾವಿಸಬೇಕಿದೆ ಎಂದು ಈ ಕುಟುಂಬ ಮನವಿ ಮಾಡಿದೆ.

lock-down-effect-for-poor
ನಿರ್ಗತಿಕ ಕುಟುಂಬಕ್ಕೆ ಲಾಕ್​ಡೌನ್​ ಬರೆ

By

Published : Apr 21, 2020, 5:58 PM IST

ಕೊಳ್ಳೇಗಾಲ(ಚಾಮರಾಜನಗರ): ಕೂಲಿ ಅರಸಿ ನಾಲ್ಕು ಮಕ್ಕಳು, ಹೆಂಡತಿಯೊಂದಿಗೆ ಬಂದ ಮೈಸೂರು ಜಿಲ್ಲೆಯಲ್ಲಿಂದ ಬಂದ ವ್ಯಕ್ತಿಯ ಕುಟುಂಬವೊಂದು ಲಾಕ್​ಡೌನ್​ನಿಂದಾಗಿ ಬೀದಿಗೆ ಬಿದ್ದಿದೆ. ಇತ್ತ ಸೂರು ಇಲ್ಲದೇ, ಅತ್ತ ಉದ್ಯೋಗವೂ ಇಲ್ಲದೇ ಅಕ್ಷರಶಃ ಕಂಗಾಲಾಗಿದೆ.

ನಿರ್ಗತಿಕ ಕುಟುಂಬಕ್ಕೆ ಲಾಕ್​ಡೌನ್​ ಬರೆ

ಎರಡು ವರ್ಷಗಳಿಂದ ತಾಲೂಕಿನ ಸತ್ತೇಗಾಲ ಗ್ರಾಮ ಪಂಚಾಯತ್​ನಲ್ಲಿ ದಿನಗೂಲಿ ಕೆಲಸ ಮಾಡಿಕೊಂಡಿದ್ದ ರಾಜು ಕುಟುಂಬ, ಗ್ರಾಮದ ಬಸ್​ ನಿಲ್ದಾಣದಲ್ಲಿ ವಾಸವಾಗಿತ್ತು. ಮೈಸೂರಿನ ನರಸೀಪುರದಿಂದ ಬಂದ ಈ ಕುಟುಂಬಕ್ಕೆ ಸೂರಿನ ಅವಶ್ಯಕತೆ ಇದೆ. ಸರ್ಕಾರ ಕಷ್ಟಕ್ಕೆ ಸ್ಪಂದಿಸಬೇಕಿದೆ ರಾಜು ಬೇಡಿಕೊಂಡಿದ್ದಾನೆ.

ಪತ್ನಿ ಸೇರಿದಂತೆ ನಾಲ್ಕು ಮಕ್ಕಳ ಭವಿಷ್ಯ ನೋಡಿಕೊಳ್ಳಬೇಕಿದೆ. ಜೀವನ ನಿರ್ವಹಣೆ ತುಂಬ ಕಷ್ಟವಾಗಿದೆ. ಕೂಡಲೇ ಸರ್ಕಾರ ಸೂರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಕೂಲಿ ಕಾರ್ಮಿಕ ರಾಜು ಮೊರೆಯಿಟ್ಟಿದ್ದಾನೆ.

ABOUT THE AUTHOR

...view details