ಕರ್ನಾಟಕ

karnataka

ETV Bharat / state

ಗಡಿಜಿಲ್ಲೆ ಎಣ್ಣೆ ಅಂಗಡಿ ಮುಂದೆ ಗುಂಡುಪ್ರಿಯರ ದಂಡು...ಸಾಮಾಜಿಕ ಅಂತರ ಕಾಪಾಡಿಕೊಂಡ ಕುಡಕರು - Liquor shops Open in Chamarajanagar

ಚಾಮರಾಜನಗರ ಜಿಲ್ಲೆಯಲ್ಲಿ ಮದ್ಯಪ್ರಿಯರು ಮುಂಜಾನೆಯಿಂದಲೇ ಎಣ್ಣೆಗಾಗಿ ಅಂಗಡಿ ಮುಂದೆ ಕಾದು ಕುಳಿತಿದ್ದಾರೆ.

ಚಾಮರಾಜನಗರ
Chamarajanagar

By

Published : May 4, 2020, 1:16 PM IST

ಚಾಮರಾಜನಗರ: ಲಾಕ್​ಡೌನ್​ ಸಡಿಲಿಕೆಯಾಗಿ ಇಂದು ಮದ್ಯದಂಗಡಿ ತೆರೆದಿರುವುದರಿಂದ ಕುಡುಕರು ಜಿಲ್ಲಾದ್ಯಂತ ಎಂಎಸ್ಐಎಲ್ ಮುಂದೆ ಸರತಿ ಸಾಲಲ್ಲಿ ನಿಂತಿದ್ದಾರೆ.

9 ಗಂಟೆಗೆ ತೆರೆಯುವ ಮದ್ಯದಂಗಡಿಗೆ ಬೆಳಗ್ಗೆಯಿಂದಲೇ ಸರತಿ ಸಾಲಲ್ಲಿ ನಿಂತು ಎಣ್ಣೆ ಕುಡಿಯಲು ತುದಿಗಾಲಲ್ಲಿ ನಿಂತು ಚಡಪಡಿಸುತ್ತಿದ್ದಾರೆ.

ಎಣ್ಣೆ ಅಂಗಡಿ ಮುಂದೆ ಗುಂಡುಪ್ರಿಯರ ದಂಡು

ಒಂದೂವರೆ ತಿಂಗಳಿನ ಬಳಿಕ ಮದ್ಯದಂಗಡಿಗಳು ತೆರೆಯುತ್ತಿರುವುದರಿಂದ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮದ್ಯಕ್ಕಾಗಿ ಕಾದು ಕುಳಿತಿದ್ದಾರೆ.

ಇದೇ ಪರಿಸ್ಥಿತಿ ಗುಂಡ್ಲುಪೇಟೆ, ಕೊಳ್ಳೇಗಾಲದಲ್ಲೂ ಕಂಡುಬಂದಿದ್ದು ಕಿಕ್ಕೇರಿಸಿಕೊಳ್ಳಲು ಗುಂಡುಪ್ರಿಯರು ಸದ್ಯ ಮುಗಿಬೀಳುತ್ತಿದ್ದಾರೆ.

ABOUT THE AUTHOR

...view details