ಗುಂಡ್ಲುಪೇಟೆ: ಅನುಮಾನಾಸ್ಪದವಾಗಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ನಡೆದಿದೆ.
ಅನುಮಾನಾಸ್ಪದವಾಗಿ ವ್ಯಕ್ತಿ ಸಾವು: ತಾಯಿಯಿಂದ ದೂರು ದಾಖಲು - ಅನುಮಾನಾಸ್ಪದ ಯುವಕ ಸಾವು
ಜಮೀನೊಂದಕ್ಕೆ ವೈರಿಂಗ್ ಕೆಲಸಕ್ಕೆ ತೆರಳಿದ್ದ ವ್ಯಕ್ತಿ ನಂತರ ಮನೆಯ ಪಡಸಾಲೆಗೆ ಬಂದು ಅಂಗಾತ ಮಲಗಿ ಮೃತಪಟ್ಟಿದ್ದಾನೆ. ಇದರಿಂದಾಗಿ ಮೃತನ ತಾಯಿ ಮಂಗಳಮ್ಮ ವೈರಿಂಗ್ ಕೆಲಸ ಮಾಡುವಾಗ ಮೃತಪಟ್ಟಿದ್ದಾನೋ ಅಥವಾ ಪಡಸಾಲೆಯಲ್ಲಿಯೇ ಮೃತಪಟ್ಟಿದ್ದಾನೋ ತಿಳಿಯುತ್ತಿಲ್ಲ ಎಂದು ದೂರು ದಾಖಲಿಸಿದ್ದಾರೆ.
ಯುವಕ ಸಾವು
ಇದೇ ಗ್ರಾಮದಲ್ಲಿ ಲೈನ್ಮನ್ ಕೆಲಸ ಮಾಡುತ್ತಿದ್ದ ರೇಚಪ್ಪ( 35) ಮೃತ ವ್ಯಕ್ತಿ. ಈತ ಬುಧವಾರ ಜಮೀನೊಂದರಲ್ಲಿ ವೈರಿಂಗ್ ಕೆಲಸಕ್ಕೆ ತೆರಳಿದ್ದ. ನಂತರ ಮನೆಯ ಪಡಸಾಲೆಗೆ ಬಂದು ಅಂಗಾತ ಮಲಗಿ ಮೃತಪಟ್ಟಿದ್ದಾನೆ. ಇದರಿಂದಾಗಿ ಮೃತನ ತಾಯಿ ಮಂಗಳಮ್ಮ ವೈರಿಂಗ್ ಕೆಲಸ ಮಾಡುವಾಗ ಮೃತಪಟ್ಟಿದ್ದಾನೋ ಅಥವಾ ಪಡಸಾಲೆಯಲ್ಲಿಯೇ ಮೃತಪಟ್ಟಿದ್ದಾನೋ ತಿಳಿಯುತ್ತಿಲ್ಲ ಎಂದು ದೂರು ದಾಖಲಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯಿಂದ ಸತ್ಯ ಹೊರ ಬರಲಿದೆ ಎಂಬ ನಿರೀಕ್ಷೆಯಲ್ಲಿ ತಾಯಿ ಮತ್ತು ಕುಟುಂಬದವರು ಇದ್ದಾರೆ.