ಚಾಮರಾಜನಗರ: ಪ್ರೀತಿ ವಿಚಾರದಲ್ಲಿ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಕೇಸಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಹೊಸೂರು ಬಡಾವಣೆಯ ಅಭಿಷೇಕ್(20), ವಿನೋದ್(23) ಬಂಧಿತ ಆರೋಪಿಗಳಾಗಿದ್ದು, ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಹೊಸೂರು ಬಡಾವಣೆಯ ಚಿಕ್ಕರಾಜು (30) ಎಂಬಾತ ಬೆಂಗಳೂರಿನಲ್ಲಿ ಲೈಟ್ ಬಾಯ್ ಆಗಿದ್ದು, ಯುಗಾದಿ ಹಬ್ಬಕ್ಕೆಂದು ಮನೆಗೆ ಬಂದಿದ್ದಾಗ ಕೊಲೆಯಾಗಿದ್ದ. ಮೃತನ ತಮ್ಮ ಸೋನಾಕ್ಷಿ ಎಂಬಾಕೆಯನ್ನು ಪ್ರೀತಿಸುತ್ತಿದ್ದರಿಂದಲೇ ಯುವತಿ ಸಂಬಂಧಿಕರು ಚಿಕ್ಕರಾಜುಗೆ ಚಾಕು ಇರಿದಿದ್ದಾರೆ ಎನ್ನಲಾಗ್ತಿದೆ.