ಚಾಮರಾಜನಗರ:ಗ್ರಾಮದ ಸುತ್ತಮುತ್ತ ಚಿರತೆಗಳು ಬೀಡುಬಿಟ್ಟಿದ್ದು ರೈತರು ಇತ್ತ ಬೆಳೆ ಕಾವಲಿಗೂ ತೆರಳಲಾಗದೆ ಬಿತ್ತನೆಯನ್ನೂ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಚಾಮರಾಜನಗರ ತಾಲೂಕಿನ ಯಾನಗಹಳ್ಳಿಯಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು ರೈತರು ಭೂಮಿ ಹದಗೊಳಿಸಿದ್ದಾರೆ. ಹಲವರು ಬಿತ್ತನೆ ಕೆಲಸವನ್ನೂ ಮಾಡಿ ಮಾಡಿದ್ದಾರೆ. ಆದರೆ, ಗ್ರಾಮದ ಸುತ್ತಮುತ್ತಲಿನ ಕ್ವಾರಿಗಳಲ್ಲಿ ಬೀಡು ಬಿಟ್ಟಿರುವ 6ಕ್ಕೂ ಹೆಚ್ಚು ಚಿರತೆಗಳಿಂದ ಹೊಲಗಳಿಗೆ ತೆರಳಲು ಹೆದರಬೇಕಾದ ಸ್ಥಿತಿ ಉದ್ಭವಿಸಿದೆ.
ಗ್ರಾಮದ ಸುತ್ತಮುತ್ತಲೂ ಬೀಡುಬಿಟ್ಟ ಚಿರತೆಗಳು ಈ ಕುರಿತು ಯಾನಗಹಳ್ಳಿ ಮೇಲೂರಿನ ಪಾಪಣ್ಣ ಎಂಬ ರೈತ ಮಾತನಾಡಿ, ಕ್ವಾರಿ ಪಕ್ಕವೇ ಜಮೀನಿದೆ. ಹಗಲು ಹೊತ್ತಿನಲ್ಲೇ ಜಮೀನಿನಲ್ಲಿ ಅಡ್ಡಾಡಲಾಗದ ಸ್ಥಿತಿಯಿದೆ. ಕುರಿ, ಹಸುಗಳನ್ನು ಹೊರಗಡೆ ಮೇಯಲು ಬಿಡಲಾಗುತ್ತಿಲ್ಲ. ಬಿತ್ತನೆಯನ್ನೂ ಮಾಡಲಾಗುತ್ತಿಲ್ಲ. ಕೆಲವರು ಬಿತ್ತನೆ ಮಾಡಿದ್ದಾರೆ. ಆದರೆ ರಾತ್ರಿ ಕಾವಲಿಗೆ ಯಾರೂ ಹೋಗುತ್ತಿಲ್ಲ ಎಂದರು.
ಅರಣ್ಯ ಇಲಾಖೆಯ ಬೋನಿಗಂತೂ ಚಿರತೆ ಬೀಳುತ್ತಿಲ್ಲ. ಇಲಾಖೆ ಬೋನಿಟ್ಟು 4 ದಿನವಾಗಿದೆ. ಆದ್ರೆ ಇತ್ತ ಅದು ಸುಳಿಯುತ್ತಿಲ್ಲ. ಕಾಡಿನಲ್ಲಿರುವ ಚಿರತೆ ಹಿಡಿಯುವುದು ಬೇಡ. ಗ್ರಾಮದಂಚಿನಲ್ಲೇ ಸೆರೆ ಹಿಡಿಯಲೇಕೆ ಮೀನಮೇಷ? ಅನ್ನೋದು ಮತ್ತೋರ್ವ ರೈತ ಸೋಮೇಶ್ ಆಕ್ರೋಶ.