ಚಾಮರಾಜನಗರ :ಜಿಲ್ಲೆಯಹುಂಡಿಪುರ ಗ್ರಾಮದಲ್ಲಿ ಚಿರತೆ ಹೆಜ್ಜೆ ಗುರುತುಗಳು ಕಂಡು ಬಂದಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ಹುಂಡಿಪುರದಲ್ಲಿ ಚಿರತೆ ಹೆಜ್ಜೆ ಗುರುತು: ಆತಂಕದಲ್ಲಿ ಗ್ರಾಮಸ್ಥರು - ಹುಂಡಿಪುರ ಗ್ರಾಮ
ಜಿಲ್ಲೆಯ ಹುಂಡಿಪುರ ಗ್ರಾಮದಲ್ಲಿ ಚಿರತೆ ಹೆಜ್ಜೆ ಗುರುತುಗಳು ಕಂಡು ಬಂದಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
Leopard footprint
ಹುಂಡಿಪುರ ಗ್ರಾಮದ ರಾಮಲಿಂಗಪ್ಪ ಎಂಬುವವರ ತೋಟದಲ್ಲಿ ಚಿರತೆಯ ಹೆಜ್ಜೆ ಗುರುತು ಕಾಣಿಸಿಕೊಂಡಿದ್ದು, ಮುನ್ನೆಚರಿಕೆಯಾಗಿ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯಾಧಿಕಾರಿ ನವೀನ್ ಕುಮಾರ್ 3 ಬೋನುಗಳನ್ನು ಇಟ್ಟಿದ್ದಾರೆ. ಇತ್ತ ಮಂಚಹಳ್ಳಿ ಗ್ರಾಮದಲ್ಲೂ ಚಿರತೆ ಹೆಜ್ಜೆ ಗುರುತುಗಳು ಕಂಡು ಬಂದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಸೆಪ್ಟೆಂಬರ್ 01ರಂದು ಚೌಡಹಳ್ಳಿ ಗ್ರಾಮದ ಶಿವಮಾದಯ್ಯ ಎಂಬ ವ್ಯಕ್ತಿಯನ್ನು ಹುಲಿಯೊಂದು ಕೊಂದು ತಿಂದಿತ್ತು. ಅಂದಿನಿಂದಲೂ ನರಭಕ್ಷಕ ಹುಲಿ ಪತ್ತೆಯಾಗದಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.