ಗುಂಡ್ಲುಪೇಟೆ(ಚಾಮರಾಜನಗರ):ಮೂರು ದಿನಗಳ ಹಿಂದೆ ಚಿರತೆಯೊಂದು ಪಾಳು ಬಾವಿಗೆ ಬಿದ್ದಿತ್ತು. ಇಂದು ಏಣಿಯ ಸಹಾಯದಿಂದ ಅದು ಹೊರ ಹೋಗಿರುವ ಫೋಟೋ ಸೆರೆಯಾಗಿದೆ.
ತಾಲೂಕಿನ ಹಸಗೂಲಿ ಗ್ರಾಮದ ಪಾಳುಬಾವಿಗೆ ಮೂರು ದಿನಗಳ ಹಿಂದೆ ಚಿರತೆಯೊಂದು ಬಿದ್ದಿತ್ತು. ಅದನ್ನು ಹೊರಗೆತ್ತಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಹಾಸ ನಡೆಸಿದ್ದರು.