ಚಾಮರಾಜನಗರ:ಮೈಸೂರು ಗಡಿ ನಂಜನಗೂಡು ತಾಲೂಕಿನ ದೇವನೂರಿನ ಜಮೀನೊಂದರಲ್ಲಿ ಕೆಲಸ ಮಾಡುತ್ತಿದ್ದ ರೈತರಿಗೆ ಚಿರತೆ ಮರಿ ಸಿಕ್ಕಿದೆ.
ಗ್ರಾಮದ ಅಣ್ಣಯ್ಯಪ್ಪ ಎಂಬುವರ ಜಮೀನಿನಲ್ಲಿ ಚಿರತೆ ಮರಿ ಸಿಕ್ಕಿದೆ. ಇದು ಅಂದಾಜು ಒಂದೆರೆಡು ವಾರಗಳ ಹಿಂದೆ ಜನಿಸಿರುವ ಮರಿ ಎನ್ನಲಾಗಿದೆ. ಕೆಲವು ದಿನಗಳಿಂದ ಗ್ರಾಮದ ಜಮೀನುಗಳಲ್ಲಿ ಆಗಾಗ ಚಿರತೆಯೊಂದು ಪ್ರತ್ಯಕ್ಷವಾಗುತ್ತಿದ್ದ ಹಿನ್ನೆಲೆ 15 ದಿನಗಳಿಂದ ಅರಣ್ಯ ಇಲಾಖೆ ಬೋನಿಟ್ಟಿತ್ತು. ಆದರೆ, ಅದು ಬೋನಿಗೆ ಬಿದ್ದಿರಲಿಲ್ಲ. ಇದೀಗ ಅದರ ಮರಿ ಸಿಕ್ಕಿದೆ.