ಚಾಮರಾಜನಗರ :ಚಿರತೆಯೊಂದು ಕೆಲವೇ ತಾಸುಗಳ ಅಂತರದಲ್ಲಿ ಮೂವರು ರೈತರ ಮೇಲೆ ದಾಳಿ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ವೀರನಪುರ ಹಾಗೂ ಹಳೇ ಪುರದಲ್ಲಿ ನಡೆದಿದೆ.
ಚಿರತೆ ದಾಳಿ, ಮೂವರು ರೈತರಿಗೆ ಗಂಭೀರ ಗಾಯ.. - ರೈತರ ಮೇಲೆ ಚಿರತೆ ದಾಳಿ
ಕಳೆದ ವಾರವಷ್ಟೇ ಇದೇ ಭಾಗದಲ್ಲಿ ಕರುವೊಂದನ್ನು ಚಿರತೆ ತಿಂದು ಹಾಕಿದೆ ಎಂದು ತಿಳಿದು ಬಂದಿದೆ. ಅರಣ್ಯಾಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ವೀರನಪುರ ಗ್ರಾಮದ ಶಂಭುಲಿಂಗಪ್ಪ, ಗಣೇಶ್ ಹಾಗೂ ಹಳೇಪುರದ ಸಿದ್ದರಾಜು ಎಂಬುವರು ದಾಳಿಗೊಳಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ತೋಟದ ಮನೆಯಲ್ಲಿದ್ದ ಗಣೇಶ್, ಶಂಬುಲಿಂಗಪ್ಪ ಡೈರಿಗೆ ಹಾಲು ಹಾಕಲು ಹೊರಬಂದ ವೇಳೆ ಇಬ್ಬರ ಕತ್ತು, ಎದೆ ಭಾಗಕ್ಕೆ ಗಂಭೀರವಾಗಿ ಪರಚಿ, ಕಚ್ಚಿ ಚಿರತೆ ಗಾಯಗೊಳಿಸಿದೆ. ಹಳೇಪುರ ಗ್ರಾಮದ ಸಿದ್ದರಾಜು ಎಂಬುವರು ಕೊಟ್ಟಿಗೆಯಲ್ಲಿ ಮಲಗಿದ್ದಾಗ ದಾಳಿ ಮಾಡಿದ ವೇಳೆ ಮನೆಯವರ ಕೂಗಾಟಕ್ಕೆ ಬೆದರಿ ಮಾಯವಾಗಿದೆ.
ಕಳೆದ ವಾರವಷ್ಟೇ ಇದೇ ಭಾಗದಲ್ಲಿ ಕರುವೊಂದನ್ನು ಚಿರತೆ ತಿಂದು ಹಾಕಿದೆ ಎಂದು ತಿಳಿದು ಬಂದಿದೆ. ಅರಣ್ಯಾಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.