ಚಾಮರಾಜನಗರ:ದೇಶದಲ್ಲೇ ರಾಷ್ಟ್ರೀಯ ಅಭಯಾರಣ್ಯಗಳಲ್ಲಿ ಹೆಸರುವಾಸಿಯಾಗಿರುವ ಬಂಡೀಪುರಕ್ಕೆ ಪ್ರವಾಸಿಗರ ದಂಡೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಕೇವಲ 2 ತಿಂಗಳಲ್ಲಿ ದಾಖಲೆಯ ಮೊತ್ತದ ಶುಲ್ಕ ಸಂಗ್ರಹವಾಗಿದೆ.
ಬಂಡೀಪುರದತ್ತ ಪ್ರವಾಸಿಗರ ಲಗ್ಗೆ: ಎರಡೇ ತಿಂಗಳಲ್ಲಿ 2 ಕೋಟಿ ರೂ. ಸಂಗ್ರಹ! - undefined
ರಾಷ್ಟ್ರೀಯ ಅಭಯಾರಣ್ಯ ಬಂಡೀಪುರದತ್ತ ಪ್ರವಾಸಿಗರ ದಂಡು. ಎರಡೇ ತಿಂಗಳಿಗೆ 2 ಕೋಟಿ 10 ಲಕ್ಷ ರೂ. ಶುಲ್ಕ ಸಂಗ್ರಹ. ಸರ್ಕಾರದ ಬೊಕ್ಕಸಕ್ಕೆ ಬಂತು ದಾಖಲೆಯ ಹಣ.
ಕಳೆದ ಏಪ್ರಿಲ್ನಲ್ಲಿ 77 ಲಕ್ಷ ಹಾಗೂ ಮೇನಲ್ಲಿ 1.40 ಲಕ್ಷ ಹಣ ಸಂಗ್ರಹವಾಗಿದ್ದು, ಎರಡೇ ತಿಂಗಳಿಗೆ 2 ಕೋಟಿ 10 ಲಕ್ಷ ರೂ. ಸರ್ಕಾರದ ಬೊಕ್ಕಸಕ್ಕೆ ಸೇರಿದೆ. ಕಳೆದ ವರ್ಷ ಎಂಟೂವರೆ ಕೋಟಿ ಸಂಗ್ರಹವಾಗಿತ್ತು. ಈ ವರ್ಷ ಎರಡೇ ತಿಂಗಳಿಗೆ 2 ಕೋಟಿ ಸಂಗ್ರಹವಾಗಿದ್ದು, ವರ್ಷದ ಆದಾಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಈ ಕುರಿತು ಬಂಡೀಪುರ ಸಿಎಫ್ಒ ಬಾಲಚಂದ್ರ ಎನ್ನುವವರು 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿ, ದಾಖಲೆ ಮೊತ್ತ ಹರಿದು ಬಂದು ಸರ್ಕಾರಕ್ಕೆ ಆದಾಯ ತಂದಿರುವುದು ಸಂತೋಷದ ವಿಚಾರವಾಗಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ವಾಹನಗಳನ್ನು ಪಾರ್ಕಿಂಗ್ ಮಾಡಲು ಸ್ವಲ್ಪ ತೊಂದರೆಯಾಗುತ್ತಿದೆ. ಪಾರ್ಕಿಂಗ್ ಸಮಸ್ಯೆ, ಕ್ಯಾಂಪಸ್ನಲ್ಲಿ ಸಫಾರಿ ಕೌಂಟರ್ ಇಂದಿನಿಂದ ಬದಲಾಗಿದೆ. ಮೊದಲ ದಿನವೇ 28 ಬಸ್ಗಳು ಫುಲ್ ಆಗಿದ್ದು 4.80 ಲಕ್ಷ ರೂ. ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.