ಚಾಮರಾಜನಗರ:ಜಿಲ್ಲೆಯ ಲಿಂಗಾನಪುರ ಗ್ರಾಮದ ಸರ್ವೇ ನಂ. 203 ರಲ್ಲಿ ಸರ್ಕಾರಿ ನಿಯಮ ಉಲ್ಲಂಘಿಸಿ 2.4 ಎಕರೆ ಜಮೀನನ್ನು ಹಿರಿಯ ಅಧಿಕಾರಿಗಳ ಗಮನಕ್ಕೂ ತಾರದೆ ಸುಳ್ವಾಡಿ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹಾದೇವಸ್ವಾಮಿಗೆ ಖಾತೆ ಮಾಡಿಕೊಡಲಾಗಿತ್ತು.
ವಿಷ ದುರಂತದ ಆರೋಪಿಗೆ ಜಮೀನು ಖಾತೆ: ಮೂವರ ತಲೆದಂಡ - ಸುಳ್ವಾಡಿ ಪ್ರಕರಣ
ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹಾದೇವಸ್ವಾಮಿ ಹೆಸರಿಗೆ ಸರ್ಕಾರಿ ನಿಯಮವನ್ನು ಗಾಳಿಗೆ ತೂರಿ ಜಮೀನು ಖಾತೆ ಮಾಡಿದ್ದು, ಪ್ರಕರಣ ಸಂಬಂಧ ಮೂವರು ಕಂದಾಯ ಇಲಾಖೆಯ ಮೂವರು ಸಿಬ್ಬಂದಿಯ ತಲೆದಂಡವಾಗಿದೆ.
ಆರೋಪಿಗಳು
ಈ ವಿಚಾರ ಹೊರಬೀಳುತ್ತಿದ್ದಂತೆ ಮಾಧ್ಯಮ ಹಾಗೂ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಡಿಸಿ ಕಾವೇರಿ, ಕಾನೂನು ಉಲ್ಲಂಘಿಸಿದ ನೌಕರರನ್ನು ಅಮಾನತುಗೊಳಿಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಕಂದಾಯ ಇಲಾಖೆಯ ನಿರೀಕ್ಷಕ ನಿರಂಜನ್, ಗ್ರಾಮ ಲೆಕ್ಕಿಗರಾದ ಸತೀಶ್ ಹಾಗೂ ಹೇಮಾ ಎಂಬುವರನ್ನು ಪ್ರಕರಣ ಸಂಬಂಧ ಅಮಾನತುಗೊಳಿಸಲಾಗಿದೆ.