ಚಾಮರಾಜನಗರ: ಕೂಲಿ ಕೆಲಸಕ್ಕೆ ಬಂದ ಮೂಕಿ ಕಾರ್ಮಿಕಳೊಬ್ಬಳನ್ನು ಪುಸಲಾಯಿಸಿ ಲೈಂಗಿಕ ತೃಷೆಗೆ ಬಳಸಿಕೊಂಡಿದ್ದ ಆರೋಪಿಯನ್ನು ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಚಾಮರಾಜನಗರ: ಕೆಲಸಕ್ಕೆ ಬಂದ ಮೂಕಿಯನ್ನು ಗರ್ಭಿಣಿ ಮಾಡಿದ ಜಮೀನು ಮಾಲೀಕ ಅಂದರ್! - Land owner rape on worker in chamarajanagar district
ಕೂಲಿ ಕೆಲಸಕ್ಕೆ ಬರುತ್ತಿದ್ದ ಮೂಕಿಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಾಮರಾಜನನಗರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ಬಸವಣ್ಣ ಬಿನ್ ಮಲ್ಲದೇವರು
ಬಸವಣ್ಣ ಬಿನ್ ಮಲ್ಲದೇವರು ಬಂಧಿತ ಆರೋಪಿ. ಚಾಮರಾಜನಗರ ತಾಲೂಕಿನ ಪುತ್ತನಪುರದಲ್ಲಿ ಈ ಘಟನೆ ನಡೆದಿದೆ. ಜಮೀನು ಕೆಲಸಕ್ಕೆ ಬರುತ್ತಿದ್ದ ಮೂಕಿ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ಈಗ ಆಕೆ 6 ತಿಂಗಳು ಗರ್ಭಿಣಿ ಎಂದು ತಿಳಿದುಬಂದಿದೆ.
ಮದುವೆಯಾಗಬೇಕು ಎಂದು ಸಂತ್ರಸ್ತೆ ಪಟ್ಟು ಹಿಡಿದಿದ್ದಾಗ ಬಸವಣ್ಣ ಒಲ್ಲೆ ಎಂದಿದ್ದಾನೆ ಎನ್ನಲಾಗಿದೆ. ಹೀಗಾಗಿ, ನ್ಯಾಯಕ್ಕಾಗಿ ಸಂತ್ರಸ್ತೆ ಮತ್ತು ಆಕೆ ಸಹೋದರಿ ಠಾಣೆ ಮೆಟ್ಟಿಲೇರಿದ್ದರು. ಚಾಮರಾಜನಗರ ಪೂರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.