ಚಾಮರಾಜನಗರ : ವಿಶ್ವವಿಖ್ಯಾತ ಮೈಸೂರು ದಸರಾಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದ ಮೂರು ಆನೆಗಳು ಪ್ರಾಥಮಿಕವಾಗಿ ಆಯ್ಕೆಯಾಗಿವೆ.
ಮೈಸೂರು ದಸರಾಗೆ ಬಂಡೀಪುರದ ಲಕ್ಷ್ಮಿ, ಚೈತ್ರಾ ಜೊತೆ ಪಾರ್ಥಸಾರಥಿ ಮೈಸೂರು ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್ ಇಂದು ರಾಂಪುರ ಆನೆ ಶಿಬಿರಕ್ಕೆ ಭೇಟಿಯಿತ್ತು, ಹೆಣ್ಣಾನೆಗಳ ಪೈಕಿ ಚೈತ್ರಾ ಮತ್ತು ಲಕ್ಷ್ಮಿ ಮತ್ತು ಗಂಡಾನೆಗಳಲ್ಲಿ ಪಾರ್ಥಸಾರಥಿ ಆನೆಯನ್ನು ಪ್ರಾಥಮಿಕವಾಗಿ ಆಯ್ಕೆ ಮಾಡಿದ್ದಾರೆ.
ಅಂತಿಮ ಪಟ್ಟಿಯಲ್ಲಿ ಈ ಆನೆಗಳು ಆಯ್ಕೆಯಾದರೇ ಮೊದಲ ಹಂತದಲ್ಲಿ ಮೈಸೂರು ದಸರಾಗೆ ತೆರಳಲಿವೆ ಎಂದು ತಿಳಿದು ಬಂದಿದೆ. ಬಂಡೀಪುರ ಅರಣ್ಯ ಇಲಾಖೆಯ ಪಶು ವೈದ್ಯ ಡಾ.ವಾಸೀಂ ಮಿರ್ಜಾ ಹಾಗೂ ಎ.ಎಂ.ಗುಡಿ ವಲಯ ಅರಣ್ಯಾಧಿಕಾರಿ ಷಣ್ಮುಖ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ : ದುಬಾರಿ ಕಾರುಗಳು ಹಿಂದೆ ಬಿದ್ದ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳಿವರು!