ಕರ್ನಾಟಕ

karnataka

ETV Bharat / state

ಸತತ ಮಳೆಗೆ ಮೈದುಂಬಿದ ಕಾಡೊಳಗಿನ ಕೆರೆಗಳು: ಬಂಡೀಪುರದಲ್ಲಿ 300ಕ್ಕೂ ಹೆಚ್ಚು ಕೆರೆಗಳು ಭರ್ತಿ..! - ಮಳೆಯಿಂದ ಬಂಡೀಪುರದಲ್ಲಿ ಕೆರೆಗಳ ಭರ್ತಿ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ತಮಿಳುನಾಡಿನ ಮಧುಮಲೈ, ಕೇರಳದ ವೈನಾಡು ವನ್ಯಜೀವಿ ಅಭಯಾರಣ್ಯ ಹೊಂದಿಕೊಂಡಿದ್ದು, ಈ ಭಾಗದಲ್ಲಿ ಸತತವಾಗಿ ಮಳೆಯಾದ್ದರಿಂದ 13 ವಲಯಗಳಲ್ಲಿನ 363 ಕೆರೆಗಳು ಭರ್ತಿಯಾಗಿರುವುದು ಪರಿಸರ ಪ್ರೇಮಿಗಳ ಸಂತಸಕ್ಕೆ ಕಾರಣವಾಗಿದೆ.

Lakes Full for Rain in Bandipur
ಬಂಡೀಪುರದಲ್ಲಿ ಕೆರೆಗಳ ಭರ್ತಿ

By

Published : Nov 11, 2021, 2:58 AM IST

ಚಾಮರಾಜನಗರ: ಗುಂಡ್ಲುಪೇಟೆ ಹಾಗೂ ಕೇರಳ ಮತ್ತು ತಮಿಳುನಾಡಿನ ಗಡಿಭಾಗದ ಕಾಡಂಚಿನ ಭಾಗದಲ್ಲಿ ಸತತವಾಗಿ ಮಳೆಯಾಗುತ್ತಿರುವುದರ ಪರಿಣಾಮವಾಗಿ ಕಾಡಿನಲ್ಲಿರುವ ನೂರಾರು ಕೆರೆಗಳು ಮೈದುಂಬಿದ್ದು ಮುಂದಿನ ಬೇಸಿಗೆಯಲ್ಲಿ ಕಾಡು ಪ್ರಾಣಿಗಳಿಗೆ ನೀರು ಮತ್ತು ಮೇವಿನ ಸಮಸ್ಯೆ ಉದ್ಭವಿಸದ ವಾತಾವರಣ ನಿರ್ಮಾಣವಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ತಮಿಳುನಾಡಿನ ಮಧುಮಲೈ, ಕೇರಳದ ವೈನಾಡು ವನ್ಯಜೀವಿ ಅಭಯಾರಣ್ಯ ಹೊಂದಿಕೊಂಡಿದ್ದು, ಈ ಭಾಗದಲ್ಲಿ ಸತತವಾಗಿ ಮಳೆಯಾದ್ದರಿಂದ 13 ವಲಯಗಳಲ್ಲಿನ 363 ಕೆರೆಗಳು ಭರ್ತಿಯಾಗಿರುವುದು ಪರಿಸರ ಪ್ರೇಮಿಗಳ ಸಂತಸಕ್ಕೆ ಕಾರಣವಾಗಿದೆ.

ಮಳೆಗಾಲದಲ್ಲಿ ಜಲಮೂಲಗಳಿಂದ ತುಂಬುವ ಕೆರೆ ಬೇಸಿಗೆಯಲ್ಲಿ ಪ್ರಾಣಿಗಳಿಗೆ ನೀರಿನ ದಾಹ ತೀರಿಸುತ್ತವೆ. ಸದಾ ಕಾಡಿನ ಕೆರೆಗಳಲ್ಲಿ ನೀರು ಇರಬೇಕು ಪ್ರಾಣಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಕೆಲವೆಡೆ ಸೋಲಾರ್ ಪಂಪ್​ಗಳ ಮೂಲಕವೂ ಕೆರೆಗೆ ನೀರು ತುಂಬಿಸಲಾಗುತ್ತಿತ್ತು. ಆದರೆ, ಈಗಾಗಲೇ ಕೆರೆಗಳು ಭರ್ತಿಯಾಗಿರುವು ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಅಷ್ಟೇನೂ ನೀರಿನ ಕೊರತೆ ಬಾಧಿಸದು ಎಂಬ ವಿಶ್ವಾಸದಲ್ಲಿ ಅರಣ್ಯ ಇಲಾಖೆಯಿದೆ.

ಬಂಡೀಪುರದಲ್ಲಿ ಕೆರೆಗಳ ಭರ್ತಿ

ಭರ್ತಿಯಾದ ಪ್ರಮುಖ ಕೆರೆಗಳು:

ಬಂಡೀಪುರ ವಲಯದ ನೀಲಕಂಠರಾವ್ ಕೆರೆ, ಸೊಳ್ಳಿಕಟ್ಟೆ, ತಾವರಗಟ್ಟೆ, ಕುಂದುಕೆರೆ ವಲಯದ ಮಾಲಗಟ್ಟೆ, ಕಡಬೂರುಕಟ್ಟೆ, ದೇವರ ಮಾಡು, ಗೋಪಾಲಸ್ವಾಮಿ ಬೆಟ್ಟ ವಲಯದ ಹಿರಿ ಕೆರೆ ಕೋಳಚಿಕಟ್ಟೆ, ಹಗ್ಗದಹಳ್ಳದ ಕಟ್ಟೆ ಮುಂತಾದ ಕೆರೆಗಳಿಗೆ ನೀರು ತುಂಬಿದೆ. ಕಳೆದೊಂದು ವಾರದಲ್ಲಿ ಗೋಪಾಲಸ್ವಾಮಿ ಬೆಟ್ಟ, ಬೊಳಗುಡ್ಡ, ಟೈಗರ್ ರೋಡ್ ಭಾಗದಲ್ಲಿ ಜೋರು ಮಳೆಯಾಗಿ ಕೆರೆಗಳಿಗೆ ಹೆಚ್ಚಿನ ನೀರು ಹರಿದಿದೆ.

ಎಲ್ಲಾ ವಲಯದಲ್ಲಿ ಮಳೆಯಾಗಿರುವುದರಿಂದ ಹಸಿರು ಸಹ ಉತ್ತಮವಾಗಿದ್ದು. ಮೇವು ಸಮೃದ್ಧವಾಗಿದೆ. ನುಗು, ಯಡಿಯಲ, ಓಂಕಾರ, ಮೊಳೆಯೂರು ವಲಯದ ಭಾಗದಲ್ಲಿರುವ ಕೆರೆಗಳು ಸಹ ಭರ್ತಿಯಾಗಿದೆ.

ಕಾಡಿನಲ್ಲಿ ಮಳೆ ಕಡಿಮೆ ಆಗಿ ಕೆರೆ ಕಟ್ಟೆಗಳು ತುಂಬದಿದ್ದರೆ ಕಾಡಂಚಿನ ಗ್ರಾಮಗಳ ಜಮೀನು ಮತ್ತು ಗ್ರಾಮಗಳಿಗೆ ಪ್ರಾಣಿಗಳು ದಾಳಿಯಿಟ್ಟು ಮಾನವ- ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗುತ್ತಿತ್ತು‌. ಆದರೆ, ಈಗ ಕಾಡಿನ ಭಾಗದಲ್ಲಿ ಉತ್ತಮ ಮಳೆಯಾಗಿರುವುದರಿಂದಾಗಿ ಹಸಿರು ಮೈದಳೆದು ನಿಂತಿದೆ. ಸಫಾರಿ ವಲಯದಲ್ಲೂ ಹೆಚ್ಚು ಪ್ರಾಣಿಗಳ ಸಿಗುತ್ತಿದೆ. ಇದರಿಂದಾಗಿ ಹೆಚ್ಚು ಜನರು ಸಫಾರಿಗೆ ಆಗಮಿಸುತ್ತಿದ್ದಾರೆ. ಹೆಚ್ಚು ಮಳೆಯಾಗಿದೆ ಎಲ್ಲಾ ವಲಯದಲ್ಲಿರುವ ದೊಡ್ಡ ಕೆರೆಗಳು ತುಂಬಿದೆ. ಮುಂದಿನ ಬೇಸಿಗೆಯಲ್ಲಿ ಪ್ರಾಣಿಗಳಿಗೆ ಯಾವುದೇ ಸಮಸ್ಯೆ ಸಂಭವಿಸುವುದಿಲ್ಲ ಎಂಬುದು ಅರಣ್ಯಾಧಿಕಾರಿಗಳ ಮಾತಾಗಿದೆ‌.

ಕಳೆದ ವರ್ಷಕ್ಕೆ ಹೋಲಿಸಿದರೇ ಈ ವರ್ಷ ಹೆಚ್ಚುವರಿಯಾಗಿ ಮಳೆಯಾಗಿ, ಶೇ.90ಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಇದನ್ನು ಓದಿ:ಅರಣ್ಯಾಧಿಕಾರಿ ಶ್ರೀನಿವಾಸ್ ಬಲಿದಾನಕ್ಕೆ 3 ದಶಕ: ವೀರಪ್ಪನ್ ಊರಲ್ಲಿ ಇವರು ಎಂದಿಗೂ ಅಮರ

ABOUT THE AUTHOR

...view details