ಚಾಮರಾಜನಗರ: ಗ್ರಾಮ ಪಂಚಾಯತ್ ಚುನಾವಣೆಯನ್ನು ಎಲ್ಲಾ ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸಿ ಬೂತ್ ಮಟ್ಟದ ಪಕ್ಷ ಸಂಘಟನೆಗೆ ವೇದಿಕೆ ಮಾಡಿಕೊಂಡಿರುವ ಬೆನ್ನಲ್ಲೇ ಕುರುಬ ಸಮುದಾಯದ ಅನೇಕರು ಕಮಲ ಪಕ್ಷದ ಕಡೆ ವಾಲಿದ್ದಾರೆ.
ಗ್ರಾ.ಪಂ ಚುನಾವಣೆಗೆ ಪಕ್ಷಾಂತರ: ಕಮಲ ಹಿಡಿದ ಕುರುಬ ಸಮುದಾಯದ ನೂರಾರು ಮಂದಿ - ಬಿಜೆಪಿ ಸೇರ್ಪಡೆಯಾದ ಕುರುಬ ಸಮುದಾಯದ ಕಾರ್ಯಕರ್ತರು
ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿ ಗ್ರಾಮದಲ್ಲಿ ಶಾಸಕ ನಿರಂಜನ್ ಕುಮಾರ್ ಸಮ್ಮುಖದಲ್ಲಿ ಕುರುಬ ಸಮುದಾಯದ ಅನೇಕ ಕಾರ್ಯಕರ್ತರು ಬಿಜೆಪಿ ಪಕ್ಷ ಸೇರಿದರು.
ಗ್ರಾಪಂ ಚುನಾವಣೆಗೆ ಪಕ್ಷಾಂತರ ಪರ್ವ: ಕಮಲ ಹಿಡಿದ ಕುರುಬ ಸಮುದಾಯದ ನೂರಾರು ಮಂದಿ
ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿ ಗ್ರಾಮದಲ್ಲಿ ಶಾಸಕ ನಿರಂಜನ್ ಕುಮಾರ್ ಸಮ್ಮುಖದಲ್ಲಿ ಕುರುಬ ಸಮುದಾಯದ ನೂರಕ್ಕೂ ಹೆಚ್ಚು ಕಾರ್ಯಕರ್ತರು ಮುಖಂಡರುಗಳಾದ ರಾಜೇಗೌಡ, ಚಿದಾನಂದ, ಚಿನ್ನೇಗೌಡ ನೇತೃತ್ವದಲ್ಲಿ ಕೇಸರಿ ಪಾರ್ಟಿ ಸೇರಿ ಅಚ್ಚರಿ ಮೂಡಿಸಿದರು.
ಕಾಂಗ್ರೆಸ್ ಬುಟ್ಟಿಯಲ್ಲಿದ್ದ ಕುರುಬ ಸಮುದಾಯದ ಮತಗಳು ಬಿಜೆಪಿಗೆ ಜಾರಿದ್ದು, ಚುನಾವಣೆ ಸಮೀಪಿಸುತ್ತಿದ್ದಂತೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುವುದು ಹೆಚ್ಚಾಗಲಿದೆ ಎನ್ನಲಾಗುತ್ತಿದೆ.