ಕೊಳ್ಳೇಗಾಲ: ತಾಲೂಕಿನ ಚಿಲಕವಾಡಿ ಬೆಟ್ಟದ ಸಮೀಪ ಇರುವ ಶ್ರೀ ಶಂಭುಲಿಂಗ ಕ್ಷೇತ್ರದ ಅನುಭವ ಮಂಟಪ ಸಂಸ್ಥಾಪಕ, ಅಧ್ಯಕ್ಷ ಶ್ರೀ ಕುಮಾರ ನಿಜಗುಣ(88) ಸ್ವಾಮಿಗಳು ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿ ಮೈಸೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
ಶ್ರೀ ಶಂಭುಲಿಂಗ ಅನುಭವ ಮಂಟಪ ಸಂಸ್ಥಾಪಕ ಕುಮಾರ ನಿಜಗುಣ ಸ್ವಾಮೀಜಿ ನಿಧನ - ಕುಮಾರ ನಿಜಗುಣ ಸ್ವಾಮೀಜಿ
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀ ಶಂಭುಲಿಂಗ ಅನುಭವ ಮಂಟಪ ಸಂಸ್ಥಾಪಕ ಕುಮಾರ ನಿಜಗುಣ ಸ್ವಾಮೀಜಿ ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.
ಕುಮಾರ ನಿಜಗುಣ ಸ್ವಾಮೀಜಿ ನಿಧನ
ಶ್ರೀ ಕುಮಾರ ನಿಜಗುಣ ಸ್ವಾಮಿ ಕೊಳ್ಳೇಗಾಲದ ಮುಳ್ಳೂರು ಗ್ರಾಮದ ಪರುವಪ್ಪ ಮತ್ತು ಪುಟ್ಟಮಲ್ಲಮ್ಮ ದಂಪತಿಗೆ ಕಿರಿಯ ಪುತ್ರರಾಗಿ 1933ರ ಜೂನ್ 15 ರಂದು ಜನಿಸಿದ್ದರು. ಶ್ರೀಗಳು ತಮ್ಮ ಸಾಂಸಾರಿಕ ಹಾಗೂ ವೃತ್ತಿ ಜೀವನದಲ್ಲಿ ಸಾಕಷ್ಟು ಸಾಧನೆ, ಅನುಭವಗಳ ನಂತರ 1981ರಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ನಂತರ ಸಮಾಜ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು.
ಚಿಲುಕವಾಡಿಯಲ್ಲಿ ಗ್ರಾಮದಲ್ಲಿಂದು ಸಂಜೆ ಗುರು ಹಿರಿಯರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೇರವೇರಲಿದೆ ಎಂದು ತಿಳಿದು ಬಂದಿದೆ.
Last Updated : Jul 20, 2021, 2:25 PM IST