ಕರ್ನಾಟಕ

karnataka

ETV Bharat / state

ಬಸ್ ಬಂದ್ ಎಫೆಕ್ಟ್: ಕೊರೊನಾ ಲಾಕ್​ಡೌನ್​ ನೆನಪಿಸುತ್ತಿವೆ ಬಸ್ ನಿಲ್ದಾಣಗಳು - Corona Lockdown situation

ಚಾಮರಾಜನಗರದ ಕೆಎಸ್ಆರ್​ಟಿಸಿ ಬಸ್ ನಿಲ್ದಾಣ ಬಸ್​ಗಳಿಲ್ಲದೆ, ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ. ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ನಗರದ ಖಾಲಿ ನಿಲ್ದಾಣಗಳು, ರಸ್ತೆಗಳು ಕೊರೊನಾ ಲಾಕ್ ಡೌನ್ ಎಫೆಕ್ಟ್​ಅನ್ನು ನೆನಪಿಸುತ್ತಿವೆ. ಪ್ರತಿಭಟನೆಯ ತೀವ್ರತೆಯಿಂದಾಗಿ ಇಲಾಖೆಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದ್ದು, ಇದರ ಪರಿಣಾಮ ನಮಗೇ ಬಾಧಿಸಲಿದೆ ಎಂದು ಹೆಸರು ಹೇಳಲಿಚ್ಛಿಸದ ನಗರದ ಅಧಿಕಾರಿಯೊಬ್ಬರು ತಿಳಿಸಿದರು.

KSRTC Transport Employees protest: Bus band is reminding lockdown effect
ಬಸ್ ಬಂದ್ ಎಫೆಕ್ಟ್: ಕೊರೊನಾ ಲಾಕ್​ಡೌನ್​ ನೆನಪಿಸುತ್ತಿವೆ ಬಸ್ ನಿಲ್ದಾಣಗಳು!!

By

Published : Dec 13, 2020, 12:16 PM IST

ಚಾಮರಾಜನಗರ:ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ನಗರದ ಕೆಎಸ್ಆರ್​ಟಿಸಿ ಬಸ್ ನಿಲ್ದಾಣ ಬಸ್​ಗಳಿಲ್ಲದೆ, ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ. ನಗರದ ಖಾಲಿ ಖಾಲಿ ನಿಲ್ದಾಣಗಳು, ರಸ್ತೆಗಳು ಕೊರೊನಾ ಲಾಕ್ ಡೌನ್ ಸಂದರ್ಭವನ್ನು ನೆನಪಿಸಿದವು.

ಬಸ್ ಬಂದ್ ಎಫೆಕ್ಟ್: ಕೊರೊನಾ ಲಾಕ್​ಡೌನ್​ ನೆನಪಿಸುತ್ತಿವೆ ಬಸ್ ನಿಲ್ದಾಣಗಳು
ಬಸ್ ಬಂದ್ ಎಫೆಕ್ಟ್: ಕೊರೊನಾ ಲಾಕ್​ಡೌನ್​ ನೆನಪಿಸುತ್ತಿವೆ ಬಸ್ ನಿಲ್ದಾಣಗಳು

ಗುಂಡ್ಲುಪೇಟೆ ನಿಲ್ದಾಣ, ಕೊಳ್ಳೇಗಾಲ, ಚಾಮರಾಜನಗರದ ಬಸ್ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಇತ್ತ ಬಸ್​ಗಳೂ ಇಲ್ಲದೇ ಖಾಲಿ-ಖಾಲಿ ಹೊಡೆಯತ್ತಿವೆ. ಇದಕ್ಕೆ ಹೊರತಾಗದೆ ಖಾಸಗಿ ಬಸ್ ನಿಲ್ದಾಣವೂ ಖಾಲಿ ಖಾಲಿ ಹೊಡೆಯುತ್ತಿದ್ದು, ಜನರು ತಮ್ಮೆಲ್ಲಾ ಪ್ರಯಾಣವನ್ನು ಮೊಟಕುಗೊಳಿಸಿದ್ದಾರೆ. ಮೈಸೂರಿಗೆ ತೆರಳುವವರು ಕಾರು, ಖಾಸಗಿ ವಾಹನಗಳನ್ನು ಅವಲಂಬಿಸಿದ್ದು, ಗ್ರಾಮೀಣ ಜನರ ಓಡಾಟ ತೀರಾ ಅತ್ಯಲ್ಪವಾಗಿದೆ.

ಕಾರ್ಯ ನಿರ್ವಹಿಸಲು ಯಾವೊಬ್ಬ ನೌಕರನೂ ಬಂದಿಲ್ಲ. ನಾವು ಫೋನ್ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಕೆಲವರಂತೂ ಮೂರು ದಿನಗಳಿಂದಲೂ ಫೋನ್ ಅನ್ನು ಸ್ವಿಚ್​ ಆಫ್ ಮಾಡಿಕೊಂಡಿದ್ದಾರೆ. ಇದರಿಂದ ಇಲಾಖೆಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದ್ದು, ಇದರ ಪರಿಣಾಮ ನಮಗೇ ಬಾಧಿಸಲಿದೆ ಎಂದು ಹೆಸರು ಹೇಳಲಿಚ್ಛಿಸದ ನಗರದ ಅಧಿಕಾರಿಯೊಬ್ಬರು ತಿಳಿಸಿದರು.

ABOUT THE AUTHOR

...view details