ಚಾಮರಾಜನಗರ:ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ವೊಂದು ಹನೂರು ತಾಲೂಕಿನ ಕುಡುವಾಳೆ ಗ್ರಾಮ ಸಮೀಪದಲ್ಲಿ ಪಲ್ಟಿಯಾಗಿದ್ದ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ.
ಹನೂರು ತಾಲೂಕಿನ ಮಾಳಿಗನತ್ತ ಗ್ರಾಮದ ಶಿವಮ್ಮ (60) ಸ್ಥಳದಲ್ಲೇ ಮೃತಪಟ್ಟರೆ, ಪಿ.ಜಿ ಪಾಳ್ಯ ಗ್ರಾಮದ ರಮೇಶ್ (30) ಆಸ್ಪತ್ರೆಯಲ್ಲಿ ಹಾಗೂ ತಮಿಳುನಾಡಿನ ಆಸ್ಪತ್ರೆಗೆ ಕರೆದೊಯ್ಯುವಾಗ ಮಾಳಿಗನತ್ತ ಗ್ರಾಮದ ಸಣ್ಣರಾಯಪ್ಪ ಅಸುನೀಗಿದ್ದಾರೆ.
ಬಸ್ನಲ್ಲಿ ಪ್ರಯಾಣಿಸುತ್ತಿದ್ದ 95 ಮಂದಿಯಲ್ಲಿ 38 ಮಂದಿಗೆ ಗಾಯವಾಗಿದ್ದು, 7 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ. ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆ ಹಾಗೂ ಹನೂರಿನ ಹೋಲಿಕ್ರಾಸ್ ಮತ್ತು ಜನನಿ ಆಸ್ಪತ್ರೆಗಳಲ್ಲಿ ಗಾಯಗೊಂಡವರು ದಾಖಲಾಗಿದ್ದಾರೆ.