ಚಾಮರಾಜನಗರ: ಬಸ್ಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ 20 ಮಂದಿ ಗಾಯಗೊಂಡ ಘಟನೆ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಬಳಿ ನಡೆದಿದೆ.
ಬಸ್ಗಳ ಮಧ್ಯೆ ಅಪಘಾತ : 20 ಮಂದಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ - ಚಾಮರಾಜನಗರ ಕ್ರೈಂ ನ್ಯೂಸ್
ಕೆಎಸ್ಆರ್ಟಿಸಿ ಬಸ್ ಹಾಗೂ ಉದಯರಂಗ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಬಳಿ ನಡೆದಿದೆ.
ಅಪಘಾತ
ಕೆಎಸ್ಆರ್ಟಿಸಿ ಬಸ್ ಹಾಗೂ ಉದಯರಂಗ ಖಾಸಗಿ ಬಸ್ ನಡುವೆ ನಡೆದ ಅಪಘಾತದಲ್ಲಿ ಒಟ್ಟು 20 ಜನ ಗಾಯಗೊಂಡಿದ್ದು, ಕೆಎಸ್ಆರ್ಟಿಸಿದ ಬಸ್ಚಾಲಕ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಡೆಯರ ಪಾಳ್ಯದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಅತೀ ವೇಗದಲ್ಲಿದ್ದರಿಂದ ಕೊಳ್ಳೇಗಾಲದಿಂದ ಒಡೆಯರ ಪಾಳ್ಯದ ಕಡೆ ತೆರಳುತ್ತಿದ್ದ ಉದಯರಂಗ ಬಸ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಇನ್ನು ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಕೊಳ್ಳೇಗಾಲ ಆಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಳಕ್ಕೆ ಹನೂರು ಪೊಲೀಸರು ಭೇಟಿ ನೀಡಿದ್ದಾರೆ.