ಕರ್ನಾಟಕ

karnataka

ETV Bharat / state

ಪಾದಾಚಾರಿಗೆ ಡಿಕ್ಕಿ ಹೊಡೆದಿದ್ದ ಕೆಎಸ್ಆರ್​ಟಿಸಿ ಚಾಲಕನಿಗೆ 3 ತಿಂಗಳು ಜೈಲು - KSRTc Bus Collision on Pedestrian

ಕಿರಿಯ ಶ್ರೇಣಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಶಾ ವಾದ-ಪ್ರತಿವಾದ ಆಲಿಸಿ ಚಾಲಕನ ನಿರ್ಲಕ್ಷ್ಯ, ಅತಿವೇಗ ಸಾಬೀತಾದ ಕಾರಣ 2 ಸಾವಿರ ರೂ. ದಂಡ ಹಾಗೂ 3 ತಿಂಗಳು ಸಾದಾ ಸಜೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ..

Chamarajanagar JMFC Court
ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ

By

Published : Mar 20, 2022, 12:15 PM IST

ಚಾಮರಾಜನಗರ :ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡಿ ಪಾದಾಚಾರಿಗೆ ಡಿಕ್ಕಿ ಹೊಡೆದ ಆರೋಪ ಸಾಬೀತಾದ ಕಾರಣ ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿ ಚಾಲಕ ಜಯರಂಗಯ್ಯ ಅವರಿಗೆ 3 ತಿಂಗಳು ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಆರೋಪಿ ಕೆಎಸ್​ಆರ್​ಟಿಸಿ ಬಸ್​ ಚಾಲಕ ಜಯರಂಗಯ್ಯ ಎಂಬುವರು 2015ರ ಸೆಪ್ಟೆಂಬರ್​ನಲ್ಲಿ ಚಾಮರಾಜನಗರದಿಂದ ಗುಂಡ್ಲುಪೇಟೆ ಕಡೆಗೆ ತೆರಳುವಾಗ ಲಕ್ಕೂರಿನ ಬಳಿ ಪಾದಾಚಾರಿಯೊಬ್ಬರಿಗೆ ಡಿಕ್ಕಿ ಹೊಡೆಸಿದ್ದರು.

ಆ ವೇಳೆ, ಪಾದಾಚಾರಿಗೆ ತೀವ್ರ ಸ್ವರೂಪದ ಗಾಯಗಳಾಗಿ ತಲೆಗೂ ತೀವ್ರ ಪೆಟ್ಟು ಬಿದ್ದಿತ್ತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಬಚಾವಾಗಿದ್ದರು.

ಕಿರಿಯ ಶ್ರೇಣಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಶಾ ವಾದ-ಪ್ರತಿವಾದ ಆಲಿಸಿ ಚಾಲಕನ ನಿರ್ಲಕ್ಷ್ಯ, ಅತಿವೇಗ ಸಾಬೀತಾದ ಕಾರಣ 2 ಸಾವಿರ ರೂ. ದಂಡ ಹಾಗೂ 3 ತಿಂಗಳು ಸಾದಾ ಸಜೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಎ.ಸಿ.ಮಹೇಶ್ ವಾದ ಮಂಡಿಸಿದ್ದರು. ಘಟನೆ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ABOUT THE AUTHOR

...view details