ಕರ್ನಾಟಕ

karnataka

ETV Bharat / state

'ಕ್ರಾವ್​ ಮಗಾ' ಕಠಿಣ ತರಬೇತಿ... ಚಾಮರಾಜನಗರ ಮಹಿಳಾ ಕಾನ್ಸ್ ಟೇಬಲ್ಸ್ ಈಗ ಮತ್ತಷ್ಟು ಸ್ಟ್ರಾಂಗ್...! - krav maga self defence training for women police

'ಕ್ರಾವ್​ ಮಗಾ' ಎಂಬುದು ಇಸ್ರೇಲ್​ ಸೇನೆ ಅಭಿವೃದ್ಧಿಪಡಿಸಿದ ಸ್ವಯಂ ರಕ್ಷಣೆ ತಂತ್ರವಾಗಿದೆ. ಇದು ಕರಾಟೆ, ಬಾಕ್ಸಿಂಗ್, ಜುಡೋ, ಕುಸ್ತಿಯ ಅಂಶಗಳನ್ನು ಒಳಗೊಂಡಿದೆ. ಅಂತಾರಾಷ್ಟ್ರೀಯ ಮಟ್ಟದ ಸ್ವಯಂ ರಕ್ಷಣಾ ತಂತ್ರ ಎನಿಸಿದೆ. ಮಹಿಳಾ ಕಾನ್ಸ್​ಸ್ಟೇಬಲ್​ಗಳಲ್ಲಿ ಆತ್ಮ ವಿಶ್ವಾಸ ವೃದ್ಧಿಯಾಗುವ ಜೊತೆ ಸ್ವಯಂ‌ ರಕ್ಷಣೆಯಲ್ಲಿ ಮತ್ತಷ್ಟು ಪ್ರಬಲರಾಗಲಿದ್ದಾರೆ..

krav maga self defence training for women police
ಮಹಿಳಾ ಕಾನ್ಸ್​ಸ್ಟೇಬಲ್​ಗಳಿಗೆ 'ಕ್ರಾವ್​ ಮಗಾ' ಆತ್ಮ ರಕ್ಷಣೆಯ ತರಬೇತಿ

By

Published : Apr 19, 2021, 2:49 PM IST

Updated : Apr 19, 2021, 3:02 PM IST

ಚಾಮರಾಜನಗರ :ಮಹಿಳಾ ಕಾನ್ಸ್​ಸ್ಟೇಬಲ್​ ಎಂದು ಅಸಡ್ಡೆ ತೋರುವವರೆಗೆ ಬಲವಾದ ಪೆಟ್ಟು ಬೀಳುವುದು ಪಕ್ಕಾ. ಹುಡುಗಿಯರನ್ನು ಚುಡಾಯಿಸಿ ಪರಾರಿಯಾಗಲು ಯತ್ನಿಸಿದರೂ ಹೆಡೆಮುರಿ ಕಟ್ಟುವುದು ಶತಃಸಿದ್ಧ. ವಿಐಪಿಗಳ ಮೇಲೆ ದಾಳಿಯಾದಾಗ ಪರಿಣಾಮಕಾರಿಯಾಗಿ ಪರಿಸ್ಥಿತಿ ನಿಭಾಯಿಸಲು ಸಿದ್ಧವಾಗಿದ್ದಾರೆ ಮಹಿಳಾ ಪೊಲೀಸರು‌.

ಮಹಿಳಾ ಕಾನ್ಸ್​ಸ್ಟೇಬಲ್​ಗಳಿಗೆ 'ಕ್ರಾವ್​ ಮಗಾ' ಆತ್ಮ ರಕ್ಷಣೆಯ ತರಬೇತಿ..

ಕೇರಳ ಮೂಲದ ರಾಜನ್ ವರ್ಗೀಸ್ ಅವರು ಮೂರು ದಿನಗಳ ಕಾಲ ಜಿಲ್ಲೆಯ 30 ಮಹಿಳಾ ಕಾನ್ಸ್​ಸ್ಟೇಬಲ್​ಗಳಿಗೆ ಕ್ರಾವ್​ ಮಗಾ ಎಂಬ ಕಠಿಣ ತರಬೇತಿ ನೀಡಿದ್ದಾರೆ. ಸ್ವಯಂ ರಕ್ಷಣೆಯ ವಿವಿಧ ತಂತ್ರಗಳನ್ನು ಹೇಳಿ ಕೊಟ್ಟಿದ್ದಾರೆ.

ತರಬೇತಿಯಲ್ಲಿ ವಿಐಪಿಗಳ ಮೇಲೆ ದಾಳಿಯಾದಾಗ ಹೇಗೆ ನಿಭಾಯಿಸಬೇಕು?, ಅತ್ಯಾಚಾರದ ಸಂದರ್ಭದಲ್ಲಿ ಮಹಿಳೆಯರು ಹೇಗೆ ರಕ್ಷಿಸಿಕೊಳ್ಳಬೇಕು? ಗನ್ ಮತ್ತು ರೈಫಲ್ ಬಳಸುವಾಗ ಅನುಸರಿಸಬೇಕಾದ ಕ್ರಮಗಳು, ಆರೋಪಿಗಳು ಪರಾರಿಯಾಗುವಾಗ ಹೇಗೆ ಹೆಡೆಮುರಿ ಕಟ್ಟಬೇಕು ಎಂಬುದನ್ನು 3 ದಿನಗಳ ಕಾಲ ತರಬೇತಿ ನೀಡಿದ್ದಾರೆ‌.

ಮೇ ತಿಂಗಳು ERSS-112 ಜಿಲ್ಲೆಯಲ್ಲೂ ಜಾರಿಯಾಗಲಿದೆ. ಲೈಂಗಿಕ ದೌರ್ಜನ್ಯ, ಚುಡಾಯಿಸುವುದು, ಇನ್ನಿತರ ಮಹಿಳೆ ಸಮಸ್ಯೆಗಳು ERSSನಲ್ಲಿ ಹೆಚ್ಚು ಬರುವುದರಿಂದ ಈ ಅಂಶಗಳನ್ನು ಗುರಿಯಿಟ್ಟು ಆರಂಭದಲ್ಲಿ 30 ಮಂದಿ ಮಹಿಳಾ ಕಾನ್ಸ್​ಸ್ಟೇಬಲ್​ಗಳಿಗೆ ತರಬೇತಿ ನೀಡಲಾಗಿದೆ.‌ ಕೊರೊನಾ ಆತಂಕ‌ ಕಳೆದ ಬಳಿಕ ಇನ್ನೊಂದು ಬಾರಿ ತರಬೇತಿ ಕೊಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ‌ ಥಾಮಸ್ ತಿಳಿಸಿದರು.

'ಕ್ರಾವ್​ ಮಗಾ' ಎಂಬುದು ಇಸ್ರೇಲ್​ ಸೇನೆ ಅಭಿವೃದ್ಧಿಪಡಿಸಿದ ಸ್ವಯಂ ರಕ್ಷಣೆ ತಂತ್ರವಾಗಿದೆ. ಇದು ಕರಾಟೆ, ಬಾಕ್ಸಿಂಗ್, ಜುಡೋ, ಕುಸ್ತಿಯ ಅಂಶಗಳನ್ನು ಒಳಗೊಂಡಿದೆ. ಅಂತಾರಾಷ್ಟ್ರೀಯ ಮಟ್ಟದ ಸ್ವಯಂ ರಕ್ಷಣಾ ತಂತ್ರ ಎನಿಸಿದೆ. ಮಹಿಳಾ ಕಾನ್ಸ್​ಸ್ಟೇಬಲ್​ಗಳಲ್ಲಿ ಆತ್ಮ ವಿಶ್ವಾಸ ವೃದ್ಧಿಯಾಗುವ ಜೊತೆ ಸ್ವಯಂ‌ ರಕ್ಷಣೆಯಲ್ಲಿ ಮತ್ತಷ್ಟು ಪ್ರಬಲರಾಗಲಿದ್ದಾರೆ.

Last Updated : Apr 19, 2021, 3:02 PM IST

ABOUT THE AUTHOR

...view details