ಕರ್ನಾಟಕ

karnataka

ETV Bharat / state

ಬಿ.ವೈ.ವಿಜಯೇಂದ್ರ‌ ಅಂಕಿಅಂಶವಿಲ್ಲದೆ ಕಾಂಗ್ರೆಸ್‌ ಬಗ್ಗೆ ಮಾತನಾಡಿದ್ದಾರೆ: ಧ್ರುವ ನಾರಾಯಣ್ - ಧ್ರುವ ನಾರಾಯಣ ವಿಧಾನ ಪರಿಷತ್ ಚುನಾವಣಾ ಪ್ರಚಾರ

ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ಅಸ್ತಿತ್ವವನ್ನು ಕಳೆದುಕೊಂಡಿದ್ದು, ರಾಜ್ಯದಲ್ಲಿ ಸ್ವಲ್ಪ ಉಳಿದುಕೊಂಡಿದೆ ಎಂದಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಮಾಜಿ ಸಂಸದ ಧ್ರುವ ನಾರಾಯಣ ತಿರುಗೇಟು ನೀಡಿದ್ದಾರೆ.

kpcc-working-president-dhruva-narayana-on-by-raghavendra
ಬಿ.ವೈ ವಿಜಯೇಂದ್ರ‌ಗೆ ಅಂಕಿ ಅಂಶದ ಕೊರತೆ: ಧ್ರುವ ನಾರಾಯಣ್ ತಿರುಗೇಟು

By

Published : Dec 5, 2021, 8:46 AM IST

ಕೊಳ್ಳೇಗಾಲ(ಚಾಮರಾಜಗರ): ಬಿಜೆಪಿ ಪಕ್ಷದ ಬಿ.ವೈ.ವಿಜಯೇಂದ್ರ ಇದೀಗ ರಾಜಕೀಯದಲ್ಲಿ ಬೆಳೆಯುತ್ತಿರುವ ಯುವಕ. ಅವರು ಯಾವುದೇ ಅಂಕಿಅಂಶವಿಲ್ಲದೇ ಕಾಂಗ್ರೆಸ್ ‌ಬಗ್ಗೆ ಮಾತನಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಹೇಳಿದರು‌.

ಕೊಳ್ಳೇಗಾಲದ ಖಾಸಗಿ‌ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜಸ್ಥಾನ, ಪಂಜಾಬ್ ಇನ್ನಿತರ ರಾಜ್ಯದಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿದೆ‌. ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ 19 ಕೋಟಿ‌ ಜನರ ಮತವನ್ನು ಕಾಂಗ್ರೆಸ್ ಗಳಿಸಿದೆ.


ಬಿಜೆಪಿಯವರು ಜಾತಿ‌, ಧರ್ಮದ ಆಧಾರದಲ್ಲಿ ಮತ ಸೆಳೆಯುತ್ತಾರೆಯೇ ವಿನಃ ಅಭಿವೃದ್ಧಿಯ ವಿಷಯವನ್ನು ಪ್ರಸ್ತಾಪಿಸುವುದಿಲ್ಲ. ವಿಜಯೇಂದ್ರ ಮತ್ತು ಬಿಜೆಪಿ ಮುಖಂಡರೆಲ್ಲರೂ ಹಿಂದುತ್ವ, ಜಾತಿ, ಕೋಮಿನ ಬಗ್ಗೆ ಮಾತನಾಡುತ್ತಾರೆ. ಅವರು ತಮ್ಮ ಆಡಳಿತಾವಧಿಯಲ್ಲಿ ಏನು ಮಾಡಿದ್ದೇವೆ ಎಂಬುದನ್ನು‌ ಹೇಳುವುದಿಲ್ಲ. ಮುಖ್ಯಮಂತ್ರಿಗಳ ಕ್ಷೇತ್ರ ಸಮೀಪವಿರುವ ಹಾನಗಲ್​ನಲ್ಲಿ ಕಾಂಗ್ರೆಸ್ ಗೆದ್ದಿದೆ. ಮಸ್ಕಿ‌ಯಲ್ಲೂ 31 ಸಾವಿರ ಅಂತರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಬೇಸತ್ತು ಜನರು ಕಾಂಗ್ರೆಸ್ ಪಕ್ಷದ ಕಡೆಗೆ ಒಲವು ತೋರಿಸುತ್ತಿದ್ದಾರೆ. ಹಾಗಾಗಿ, ಕಾಂಗ್ರೆಸ್​ಗೆ ಮುಂಬರುವ ದಿನಗಳಲ್ಲಿ ಉಜ್ವಲ ಭವಿಷ್ಯವಿದೆ ಎಂದು ಹೇಳಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನವನ್ನು ಗೆಲ್ಲುವ ನಿರೀಕ್ಷೆ ಇದೆ. ಪಕ್ಷ ಮತ್ತಷ್ಟು ಬಲಗೊಳ್ಳಲಿದೆ. ಮುಂಬರುವ ವಿಧಾನಸಭಾ ಕ್ಷೇತ್ರದ ಚುನಾವಣೆಗೂ ಪೂರಕವಾಗಲಿದೆ‌‌ ಎಂದು ತಿಳಿಸಿದರು.

ಕೆಜಿಎಫ್‌ ಬಾಬು ವಿಚಾರವಾಗಿ ಸಚಿವ ಸೋಮಶೇಖರ್ ಹೇಳಿಕೆಗೆ ಉತ್ತರಿಸುತ್ತಾ, ನಮ್ಮ ಪಕ್ಷದ ಅಭ್ಯರ್ಥಿ ಕೆಜಿಎಫ್ ಬಾಬು ಮೇಲೆ 30ಕ್ಕೂ ಎಫ್​ಐಆರ್​ ದಾಖಲಾಗಿವೆ ಎಂದು ಹೇಳಿಕೆ ನೀಡಿದ್ದರು. ಈ ಸಂಬಂಧ ಕೆಜಿಎಫ್ ಬಾಬು ಅವರೇ ಸ್ವತಃ ಪ್ರೆಸ್ ಕಾನ್ಫರೆನ್ಸ್ ಮೂಲಕ ವಿವರಿಸಿದ್ದಾರೆ. 30 ಎಫ್​ಐಆರ್​ನಲ್ಲಿ 24 ಖುಲಾಸೆಯಾಗಿದೆ. ಎಫ್​ಐಆರ್​ ಆದ ಮಾತ್ರಕ್ಕೆ ಅಪರಾಧಿ ಅಂತ ಹೇಳಲು ಸಾಧ್ಯವಿಲ್ಲ ಎಂದರು.

ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ಡಾ.ತಿಮ್ಮಯ್ಯ ಪರ ಅವರು ಮತಯಾಚನೆ ಮಾಡಿದರು.

ಇದನ್ನೂ ಓದಿ:ಕಾಂಗ್ರೆಸ್​​​ನಲ್ಲಿ ಜಾತ್ರೆ ಶುರುವಾಗಿಲ್ಲ, ಬದಲಾಗಿ ಅಂತಿಮ ಯಾತ್ರೆಗೆ ರೆಡಿಯಾಗುತ್ತಿದೆ: ಕಟೀಲ್

ABOUT THE AUTHOR

...view details