ಚಾಮರಾಜನಗರ: ದೇಶದ ನಿಜವಾದ ತಾಲಿಬಾನಿಗಳು ಆರ್ಎಸ್ಎಸ್ ನವರು ಎಂದು CAA ವಿರೋಧಿಗಳು ಅಫ್ಘಾನಿಸ್ತಾನ ನೋಡಿ ತಿಳಿಯಲಿ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಾಲಿಬಾನಿಗಳು ಯಾವ ರೀತಿ ಅವರ ಧರ್ಮ ಪಾಲನೆ ಮಾಡುತ್ತಾರೋ ಅದೇ ರೀತಿ, ಭಾರತದಲ್ಲಿ ಆರ್ ಎಸ್ ಎಸ್ ಮಾಡುತ್ತಿದೆ. ತಾಲಿಬಾನಿಗೂ ಸಿಎಎಗೂ ಹೇಗೆ ಸಂಬಂಧ ಕಲ್ಪಿಸುತ್ತಾರೆ. ತಾಲಿಬಾನ್ನಿಂದ ದೇಶಕ್ಕೆ ಆಗುವ ಅನಾಹುತದ ಬಗ್ಗೆ ಕಟ್ಟೆಚ್ಚರ ವಹಿಸುವ ಕುರಿತು ಸಂಸದರು ಯೋಚಿಸಲಿ ಎಂದು ಕಿವಿಮಾತು ಹೇಳಿದರು.