...ಹೀಗೆ ಮಾಡಿದ್ರೆ ಕೊರೊನಾ ಬರಲ್ವಂತೆ: ಮೌಢ್ಯತೆಯ ಮೊರೆ ಹೋದ ಗ್ರಾಮಸ್ಥರು - ಕೊಳ್ಳೆಗಾಲ ಲೇಟೆಸ್ಟ್ ನ್ಯೂಸ್
ಕೊರೊನಾ ಸೋಂಕು ತಗುಲುವುದನ್ನು ತಡೆಗಟ್ಟಲು ಕೊಳ್ಳೆಗಾಲ ತಾಲೂಕಿನ ಗ್ರಾಮವೊಂದರ ಗ್ರಾಮಸ್ಥರು ಮೌಢ್ಯತೆಯ ಮೊರೆ ಹೋಗಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಮೌಢತ್ಯೆಯ ಮೊರೆ ಹೋದ ಜನ
ಕೊಳ್ಳೆಗಾಲ/ಚಾಮರಾಜನಗರ: ಕೊರೊನಾ ಬಾರದಂತೆ ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವ ವರ್ಗ ಒಂದು ಕಡೆಯಾದರೆ, ಗ್ರಾಮೀಣ ಪ್ರದೇಶದ ಜನರು ಮಾತ್ರ ಕೊರೊನಾ ಕಾಯಿಲೆಯಿಂದ ಬಚಾವಾಗಲು ಮೌಢ್ಯತೆಯ ಮೊರೆ ಹೋಗಿದ್ದಾರೆ.
ಸರ್ಕಾರದ ಜೊತೆ ವೈದ್ಯ ವರ್ಗ, ಪೌರಕಾರ್ಮಿಕರು, ಪೊಲೀಸ್ ಇಲಾಖೆ ಕೊರೊನಾ ತೊಲಗಿಸಲು ಶ್ರಮಿಸುತ್ತಿದ್ದಾರೆ. ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ ಜನ ಈ ರೀತಿಯ ಕ್ರಮಕ್ಕೆ ಮುಂದಾಗಿರುವುದು ಎಷ್ಟು ಸರಿ ಎಂಬುದು ಪ್ರಶ್ನೆ.