ಕರ್ನಾಟಕ

karnataka

ETV Bharat / state

ನರಳಾಡುತ್ತಿದ್ದ ವೃದ್ದೆಯನ್ನು ನೋಡದ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ.. - ಚಾಮರಾಜನಗರ ಸರ್ಕಾರಿ ಆಸ್ಪತ್ರೆ ಸುದ್ದಿ

ರೋಗಿಯನ್ನು ಚಿಕಿತ್ಸೆಗೆ ಒಳಪಡಿಸಿ ಮೈಸೂರಿನ ಕ್ಯಾನ್ಸರ್ ಆಸ್ಪತ್ರೆಗೂ ರೆಫರ್ ಮಾಡದೇ, ವ್ಯೆದ್ಯರು ತಮ್ಮ ಕರ್ತವ್ಯ ಮರೆತ್ತಿದ್ದಾರೆ ಎಂದು ರೋಗಿಯ ಸಂಬಂಧಿ ಸಾಗರ್ ಎಂಬುವರು ಆರೋಪಿಸಿದ್ದಾರೆ.

kollegala hospital doctors did not care old women suffering
ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆ

By

Published : Apr 13, 2020, 12:25 PM IST

ಕೊಳ್ಳೇಗಾಲ :ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವೃದ್ದೆಗೆ ಚಿಕಿತ್ಸೆ ನೀಡದೆ ಬೇಜಾವಾಬ್ದಾರಿತನ ತೋರಿದ ಘಟನೆ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ‌ ನಡೆದಿದೆ. ತಾಲೂಕಿನ ಗುಂಡೇಗಾಲ ಗ್ರಾಮದ ಬಸಮಣಿ ಎಂಬ ವೃದ್ದೆಯು ಗಂಟಲು ಕ್ಯಾನ್ಸರ್​ನಿಂದ ಸಾವು ಬದುಕಿನ ಮಧ್ಯ ಹೋರಾಟ ನಡೆಸುತ್ತಿದ್ದಾರೆ. ತುರ್ತು ಚಿಕಿತ್ಸೆಗಾಗಿ ರೋಗಿಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ, ತಕ್ಷಣ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಬೇಕಿದ್ದ ಆಸ್ಪತ್ರೆಯ ಸಿಬ್ಬಂದಿ ಬೇಡ್​ ಮೇಲೆ ನರಳಾಡುತ್ತಿದ್ದ ವೃದ್ಧೆಯನ್ನು ನೋಡದೆ ಬೇಜವಾಬ್ದಾರಿತನ ತೋರಿದ್ದಾರೆ ಎನ್ನಲಾಗಿದೆ.

ನರಳಾಡುತ್ತಿದ್ದ ವೃದ್ದೆಯನ್ನು ನೋಡದ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ..

ರೋಗಿಯನ್ನು ಚಿಕಿತ್ಸೆಗೆ ಒಳಪಡಿಸಿ ಮೈಸೂರಿನ ಕ್ಯಾನ್ಸರ್ ಆಸ್ಪತ್ರೆಗೂ ರೆಫರ್ ಮಾಡದೇ, ವ್ಯೆದ್ಯರು ತಮ್ಮ ಕರ್ತವ್ಯ ಮರೆತ್ತಿದ್ದಾರೆ ಎಂದು ರೋಗಿಯ ಸಂಬಂಧಿ ಸಾಗರ್ ಎಂಬುವರು ಆರೋಪಿಸಿದ್ದಾರೆ.

ಇತ್ತ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೋವಿಡ್​-19 ಭೀತಿಯ ಸಮಯಲ್ಲಿ ಜನತೆಯ ಆರೋಗ್ಯ ದೃಷ್ಟಿಯಿಂದ ಏನೆಲ್ಲ ಪೂರಕ ವ್ಯವಸ್ಥೆ ಹಾಗೂ ಆದೇಶ ಹೊರಡಿಸಿದ್ದರು ಆಸ್ಪತ್ರೆಯ ಆರೋಗ್ಯ ಸಿಬ್ಬಂದಿ ಮಾತ್ರ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ABOUT THE AUTHOR

...view details