ಕೊಳ್ಳೇಗಾಲ: ಕಾಡಿನೊಳಗೆ ಮದ್ಯ ಸೇವನೆ ಮಾಡುತ್ತಿದ್ದ ಮೂವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ದಂಡದ ಹಾಕಿ, ಎಚ್ಚರಿಕೆ ನೀಡಿರುವ ಘಟನೆ ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗ ವ್ಯಾಪ್ತಿಯಲ್ಲಿ ನಡೆದಿದೆ.
ಕೊಳ್ಳೇಗಾಲ: ಕಾಡಿನೊಳಗೆ ಗುಂಡು ಪಾರ್ಟಿ, ದಂಡದ ರುಚಿ ತೋರಿಸಿದ ಅರಣ್ಯಾಧಿಕಾರಿಗಳು
ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದ ಉಡುತೊರೆಹಳ್ಳಿಯ ಜಲಾಶಯದ ಬಳಿ ಅರಣ್ಯದ ಗಡಿಯಲ್ಲಿ ಮೂವರು ಗುಂಡು ಪಾರ್ಟಿ ಆಯೋಜಿಸಿದ್ದರು. ಆ ಮೂವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ದಂಡದ ಬಿಸಿ ಮುಟ್ಟಿಸಿ, ಎಚ್ಚರಿಕೆ ನೀಡಿದ್ದಾರೆ.
Drinks party in forest area
ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದ ಉಡುತೊರೆಹಳ್ಳಿಯ ಜಲಾಶಯದ ಬಳಿ ಅರಣ್ಯದ ಗಡಿಯಲ್ಲಿ ಮೂವರು ಗುಂಡು ಪಾರ್ಟಿ ಆಯೋಜಿಸಿದ್ದರು. ಆ ಮೂವರು ಅರಣ್ಯ ಅಧಿಕಾರಿಗಳ ಕಣ್ಣಿಗೆ ಸಿಕ್ಕಿಬಿದ್ದಿದ್ದು, ದಂಡ ಕಟ್ಟಿದ್ದಾರೆ.
ಕಾಂಚಳ್ಳಿ ಗ್ರಾಮದ ಮಹೇಶ್ (25), ರಮೇಶ್ (28), ನಾಗ (26) ಈ ಮೂವರು ಮದ್ಯ ಸೇವಿಸುವಾಗ ಸಿಕ್ಕಿ ಬಿದ್ದ ಆರೋಪಿಗಳು. ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದ ಮೇರೆಗೆ ಆ ಮೂವರಿಗೆ ತಲಾ 1 ಸಾವಿರ ರೂ. ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.