ಕರ್ನಾಟಕ

karnataka

ETV Bharat / state

ಪರ ಪುರುಷನ ಜೊತೆ‌ ಬೈಕ್​ನಲ್ಲಿ ತೆರಳಿದ್ದ ಗೃಹಿಣಿ ಸಾವು - ಬೈಕ್​ನಲ್ಲಿ ತೆರಳಿದ್ದ ಉತ್ತಂಬಳ್ಳಿ ಗೃಹಿಣಿ ಸಾವು

ಮಹಿಳೆ ಮೇ 5 ರಂದು ತನ್ನ ಗ್ರಾಮದ ಶಾಂತ‌ ಎಂಬುವನ ಜೊತೆ ಕೊಳ್ಳೇಗಾಲ ಪಟ್ಟಣಕ್ಕೆ ಬಂದಿದ್ದಳು. ಇಬ್ಬರು ಸೇರಿ ಗುಂಡಾಲ್ ಜಲಾಶಯದ ಕಡೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಶಾಂತನ ಅಜಾರೂಕತೆಯಿಂದಾಗಿ ಮಾರ್ಗಮಧ್ಯೆ ರಸ್ತೆಯ ಬದಿಯ ಹಳ್ಳಕ್ಕೆ‌ ಬೈಕ್​ ಬಿದ್ದು ಲಕ್ಷ್ಮಿ ತಲೆಗೆ ತೀವ್ರ ಪೆಟ್ಟು‌ಬಿದ್ದಿತ್ತು.

kollegala-death-of-a-housewife
ಗೃಹಿಣಿ ಸಾವು

By

Published : May 14, 2021, 9:38 PM IST

ಕೊಳ್ಳೇಗಾಲ: ಪರ‌ ಪುರುಷನೊಂದಿಗೆ ಬೈಕ್‌ನಲ್ಲಿ ತೆರಳಿದ್ದ ಗೃಹಿಣಿಯೋರ್ವಳು ಅಪಘಾತಕ್ಕೀಡಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ನಗರದಲ್ಲಿ ಜರುಗಿದೆ.

ತಾಲ್ಲೂಕಿನ ಉತ್ತಂಬಳ್ಳಿ ಗ್ರಾಮದ ಮಾದೇಶ್ ಎಂಬುವವನ ಪತ್ನಿ ಲಕ್ಷ್ಮೀ (28) ಮೃತ ದುರ್ದೈವಿ. ಮಹಿಳೆ ಮೇ 5 ರಂದು ತನ್ನ ಗ್ರಾಮದ ಶಾಂತ‌ ಎಂಬುವನ ಜೊತೆ ಕೊಳ್ಳೇಗಾಲ ಪಟ್ಟಣಕ್ಕೆ ಬಂದಿದ್ದಳು. ಇಬ್ಬರು ಸೇರಿ ಗುಂಡಾಲ್ ಜಲಾಶಯದ ಕಡೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಶಾಂತನ ಅಜಾರೂಕತೆಯಿಂದಾಗಿ ಮಾರ್ಗಮಧ್ಯೆ ರಸ್ತೆಯ ಬದಿಯ ಹಳ್ಳಕ್ಕೆ‌ ಬೈಕ್​ ಬಿದ್ದು ಲಕ್ಷ್ಮಿ ತಲೆಗೆ ತೀವ್ರ ಪೆಟ್ಟು‌ಬಿದ್ದಿತ್ತು.

ನಂತರ, ಚಿಕಿತ್ಸೆಗಾಗಿ ಕೊಳ್ಳೇಗಾಲ ‌ಸರ್ಕಾರಿ‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೂ ರವಾನಿಸಲಾಗಿತ್ತು. ಆದ್ರೆ, ದುರಾದೃಷ್ಟ ಚಿಕಿತ್ಸೆ ಫಲಕಾರಿಯಾಗದೇ‌‌ ಮೇ 13 ರಂದು ಲಕ್ಷ್ಮೀ ಮೃತಪಟ್ಟಿದ್ದಾಳೆ.

ಇನ್ನು, ಪತಿ ಮಾದೇಶ್ ತನ್ನ ಪತ್ನಿ ಸಾವಿಗೆ ಶಾಂತ ಕಾರಣ ಎಂದು ಆರೋಪಿಸಿ ಕ್ರಮ ಜರುಗಿಸುವಂತೆ ಪೊಲೀಸರಿಗೆ ದೂರು ನೀಡಿದ್ದಾನೆ. ಆರೋಪಿ ಪತ್ತೆಗೆ ಪೊಲೀಸರು ‌ಬಲೆ ಬಿಸಿದ್ದಾರೆ.

ABOUT THE AUTHOR

...view details