ಕರ್ನಾಟಕ

karnataka

ETV Bharat / state

ಕೊಳ್ಳೇಗಾಲ ಕಾಂಗ್ರೆಸ್​​ನಲ್ಲಿ ಭಿನ್ನಮತ: ಮಾಜಿ ಸಿಎಂರ ಮತ್ತೋರ್ವ ಶಿಷ್ಯ ಕಮಲಕ್ಕೆ ಜಂಪ್​​!? - Kollegala ,congress, leader ,ready , join ,BJP ,

ತಮಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಿದ್ದು, ಎಲ್ಲಿ ಕಾರ್ಯಕ್ರಮ ನಡೆಯುತ್ತದೇ ಎಂಬ ವಿಚಾರವೇ ತಿಳಿದಿರುವುದಿಲ್ಲ. 3 ಬಾರಿ ನನಗೆ ಟಿಕೆಟ್ ತಪ್ಪಿಸಿದರು. ಬಿಬಿಎಂಪಿ ಚುನಾವಣೆಯಲ್ಲಿ ನನ್ನ ಪತ್ನಿಗೂ ಟಿಕೆಟ್ ತಪ್ಪಿಸಿದರು ಎಂದು ಡಿ.ಎನ್. ನಟರಾಜ್ ಅಳಲು ತೋಡಿಕೊಂಡಿದ್ದಾರೆ.

ಮಾಜಿ ಸಿಎಂರ ಮತ್ತೋರ್ವ ಶಿಷ್ಯ ಕಮಲಕ್ಕೆ ಜಂಪ್

By

Published : Apr 4, 2019, 9:59 AM IST

ಚಾಮರಾಜನಗರ: ಕಾಂಗ್ರೆಸ್​ನಲ್ಲಿ ಭಿನ್ನಮತ ಗೋಚರಿಸುತ್ತಿದ್ದು, ಸಿದ್ದರಾಮಯ್ಯ ಪರಮಾಪ್ತ ಶಿಷ್ಯ ಕಾಂಗ್ರೆಸ್ ತೊರೆಯುವ ಮಾತನ್ನಾಡಿದ್ದಾರೆ.

ಖರ್ಗೆ ಸಂಬಂಧಿ ಹಾಗೂ ಸಿದ್ದರಾಮಯ್ಯರ ಅತ್ಯಾಪ್ತ ಶಿಷ್ಯ ಡಿ.ಎನ್. ನಟರಾಜ್ ಈಟಿವಿ ಭಾರತದೊಂದಿಗೆ ಮಾತನಾಡಿ, ಶೀಘ್ರವೇ ಕಾಂಗ್ರೆಸ್ ತೊರೆದು ಸೂಕ್ತ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ. ಸ್ವಾಭಿಮಾನ ಇರುವವರು ಯಾರೂ ಕಾಂಗ್ರೆಸ್​ನಲ್ಲಿ ಇರುವುದಿಲ್ಲ ಎಂದಿದ್ದಾರೆ.

ಮಾಜಿ ಸಿಎಂರ ಮತ್ತೋರ್ವ ಶಿಷ್ಯ ಕಮಲಕ್ಕೆ ಜಂಪ್?

ಇನ್ನು, ತಮಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಿದ್ದು, ಎಲ್ಲಿ ಕಾರ್ಯಕ್ರಮ ನಡೆಯುತ್ತದೆ ಎಂಬ ವಿಚಾರವೇ ತಿಳಿದಿರುವುದಿಲ್ಲ. 3 ಬಾರಿ ನನಗೆ ಟಿಕೆಟ್ ತಪ್ಪಿಸಿದರು. ಬಿಬಿಎಂಪಿ ಚುನಾವಣೆಯಲ್ಲಿ ನನ್ನ ಪತ್ನಿಗೂ ಟಿಕೆಟ್ ತಪ್ಪಿಸಿದರು ಎಂದು ಅಳಲು ತೋಡಿಕೊಂಡರು.

ಜಿಲ್ಲೆಯಲ್ಲಿ ಎರಡನೇ ಹಂತದ ನಾಯಕರನ್ನು ಕಾಂಗ್ರೆಸ್ ಬೆಳೆಸುತ್ತಿಲ್ಲ. ಪಾರ್ಟಿ ಕೆಲಸ ಮಾಡಿದರೂ ನಾಯಕರಿಂದ ಸ್ಪಂದನೆಯಿಲ್ಲ ಎಂದು ಕಿಡಿಕಾರಿರುವ ಅವರು, ಬಿಜೆಪಿ ನಾಯಕರು ನನ್ನನ್ನು ಗೌರವಪೂರ್ವಕವಾಗಿ ಅವರ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ. ಒಂದೆರೆಡು ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details