ಕೊಳ್ಳೇಗಾಲ: ತಾಲೂಕಿನ ಹೊಂಡರಬಾಳು ಗ್ರಾಮದ ಸಿದ್ದರಾಜು ಎಂಬುವರ ಜೋಳದ ಜಮೀನಿನಲ್ಲಿ 15 ಅಡಿ ಉದ್ದದ 48 ಕೆಜಿ ಗಾತ್ರವುಳ್ಳ ಹೆಬ್ಬಾವು ಪ್ರತ್ಯಕ್ಷವಾಗಿದೆ.
ಕೊಳ್ಳೇಗಾಲ: ಜಮೀನಿನಲ್ಲಿ ಭಾರಿ ಗಾತ್ರದ ಹೆಬ್ಬಾವು ಪ್ರತ್ಯಕ್ಷ - Kollegala python news
ಕೊಳ್ಳೇಗಾಲ ತಾಲೂಕಿನ ಹೊಂಡರಬಾಳು ಗ್ರಾಮದ ಸಿದ್ದರಾಜು ಎಂಬುವರು ಜಮೀನಿನ ವೀಕ್ಷಣೆ ಮಾಡಲು ಹೋಗಿದ್ದಾಗ ಹೆಬ್ಬಾವೊಂದು ಕಂಡಿದೆ. ನಂತರ ಈ ಬಗ್ಗೆ ಉರಗ ಸಂರಕ್ಷಕ ರಘು ಅವರಿಗೆ ಮಾಹಿತಿ ನೀಡಿ, ಅದನ್ನು ಹಿಡಿಯಲಾಗಿದೆ.
ಹೊಂಡರಬಾಳು ಗ್ರಾಮದ ಸಿದ್ದರಾಜು ಎಂಬುವರ ಜಮೀನಿನಲ್ಲಿ ಹೆಬ್ಬಾವು ಪ್ರತ್ಯಕ್ಷ
ಇಂದು ಸಂಜೆ ಸಿದ್ದರಾಜು ಎಂದಿನಂತೆ ತಮ್ಮ ಜಮೀನಿನ ವೀಕ್ಷಣೆ ಮಾಡಲು ಹೋಗಿದ್ದಾಗ ಹೆಬ್ಬಾವನ್ನು ನೋಡಿ ಹೌಹಾರಿದ್ದಾರೆ. ನಂತರ ಈ ಬಗ್ಗೆ ಉರಗ ಸಂರಕ್ಷಕ ರಘು ಅವರಿಗೆ ಮಾಹಿತಿ ನೀಡಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ರಘು ಸುರಕ್ಷಿತವಾಗಿ ಹೆಬ್ಬಾವನ್ನು ಹಿಡಿದಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಪಕ್ಕದ ಬಿಆರ್ಟಿ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ.