ಕರ್ನಾಟಕ

karnataka

ETV Bharat / state

ಕೊಳ್ಳೇಗಾಲ: ನೇರ ವೇತನಕ್ಕೆ ಆಗ್ರಹಿಸಿ ವಾಟರ್​​ಮನ್​ಗಳ ಧರಣಿ

ಹೊರ ಗುತ್ತಿಗೆ ರದ್ದುಪಡಿಸಿ ನೇರ ವೇತನ ನೀಡುವಂತೆ ಒತ್ತಾಯಿಸಿ ನಗರಸಭೆ ಎದುರು ವಾಟರ್​​ಮನ್​ಗಳು ಪ್ರತಿಭಟನೆ ನಡೆಸಿದರು.

kollegal
ನೇರ ವೇತನಕ್ಕೆ ಆಗ್ರಹಿಸಿ ವಾಟರ್ ಮ್ಯಾನ್​ಗಳ ಧರಣಿ

By

Published : Sep 29, 2020, 2:13 PM IST

ಕೊಳ್ಳೇಗಾಲ: ಸರ್ಕಾರ‌ ವಾಟರ್​​ಮನ್​ಗಳಿಗೆ ನೇರ ವೇತನ ನೀಡಬೇಕು. ಗುತ್ತಿಗೆ ಆಧಾರಿತ ವ್ಯವಸ್ಥೆ ‌ರದ್ದುಪಡಿಸಬೇಕು ಎಂದು ಆಗ್ರಹಿಸಿ ಪಟ್ಟಣದ ನಗರಸಭೆ ಕಚೇರಿ ಎದುರು ವಾಟರ್​ಮನ್​ಗಳು ಪ್ರತಿಭಟನೆ ನಡೆಸಿದರು.

ನೇರ ವೇತನಕ್ಕೆ ಆಗ್ರಹಿಸಿ ವಾಟರ್​ಮನ್​ಗಳ ಧರಣಿ

ಸರ್ಕಾರವು ಮಲತಾಯಿ ಧೋರಣೆ ‌ಮಾಡಬಾರದು. ನಾವು ಕೂಡ ಕಷ್ಟ ಪಟ್ಟು, ಕೆಸರು, ಮಣ್ಣನ್ನು ಮೈಗಂಟಿಸಿಕೊಂಡು ರಸ್ತೆಗಳಿದು ಕೆಲಸ ಮಾಡುತ್ತೇವೆ. ನಮ್ಮನ್ನು ಸಹ ಪರಿಗಣಿಸಿ ವಾಟರ್​ಮನ್​ಗಳ ಹೊರಗುತ್ತಿಗೆ ರದ್ದುಪಡಿಸಿ ನೇರ ವೇತನ‌ ನೀಡಬೇಕೆಂದು ಒತ್ತಾಯಿಸಿದರು.

ನೇರ ವೇತನಕ್ಕೆ ಆಗ್ರಹಿಸಿ ವಾಟರ್​​ಮನ್​ಗಳ ಧರಣಿ

ಈ ವೇಳೆ ವಾಟರ್​ಮನ್ ಪುಟ್ಟಮಲ್ಲ ಮಾತನಾಡಿ, ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ ‌20 ವರ್ಷಗಳಿಂದಲೂ ವಾಟರ್​​ಮನ್​‌ಗಳಾಗಿ ಕಾರ್ಯ‌ನಿರ್ವಹಿಸುತ್ತಿದ್ದೇವೆ. ಆದರೆ ಇಲ್ಲಿಯವರೆಗೂ ವೇತನದಲ್ಲಿ ತಾರತಮ್ಯ ಧೋರಣೆ ಅನುಭವಿಸುತ್ತಿದ್ದೇವೆ. ಪೌರಕಾರ್ಮಿಕರಂತೆ ನಾವು ಕಷ್ಟ ಪಟ್ಟು‌ ಕೆಲಸ ಮಾಡುತಿದ್ದೇವೆ. ಆದ್ದರಿಂದ ನೇರ ವೇತನ‌ ನೀಡಿ, ಗುತ್ತಿಗೆ ರದ್ದುಪಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ‌ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ABOUT THE AUTHOR

...view details