ಕೊಳ್ಳೇಗಾಲ :ಅಪ್ರಾಪ್ತ ಬಾಲಕಿಯನ್ನು ವ್ಯಕ್ತಿಯೋರ್ವ ಅಪಹರಿಸಿ ವಿವಾಹವಾಗಿರುವ ಘಟನೆ ನಡೆದಿದ್ದು, ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಾಮರಾಜನಗರದ ಚಂದಕವಾಡಿ ನಿವಾಸಿಯಾಗಿದ್ದ ಮಹದೇವಸ್ವಾಮಿ ಬಂಧಿತ ಆರೋಪಿ. ಈತ ಕೊಳ್ಳೇಗಾಲ ಪಟ್ಟಣದ ಬಡಾವಣೆಯೊಂದರಲ್ಲಿ ಬಾಡಿಗೆ ಮನೆಯಲ್ಲಿ ಕಳೆದ ಐದಾರು ವರ್ಷಗಳಿಂದ ವಾಸವಿದ್ದನು. ಅ.25 ರಂದು ತಮ್ಮ ಮಾಲೀಕನ ಮನೆಯಲ್ಲಿ ವಾಸವಿದ್ದ ಅಪ್ರಾಪ್ತೆಯನ್ನು ಅಪಹರಿಸಿ ಬೆಂಗಳೂರಿಗೆ ಕರೆದೊಯ್ದಿದ್ದನು.
ಈ ಸಂಬಂಧ ಬಾಲಕಿ ತಾಯಿ ಪಟ್ಟಣ ಠಾಣೆಯ ಪೊಲೀಸರಿಗೆ ಮಗಳು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ತಿಳಿಸಿದ್ದು, ಬಾಡಿಗೆದಾರ ಮಹದೇಸ್ವಾಮಿ ಎಂಬುವನು ಮಗಳನ್ನು ಅಪಹರಿಸಿರಬಹುದೆಂದು ಶಂಕಿಸಿ ದೂರು ನೀಡಿದ್ದರು.