ಕೊಳ್ಳೇಗಾಲ: 4 ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿದ್ದ ಪಟ್ಟಣದ ವ್ಯಕ್ತಿಯೋರ್ವ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
2 ದಿನಕ್ಕೆ 2 ಬಲಿ: ಕೊಳ್ಳೇಗಾಲದ ಮತ್ತೋರ್ವ ಸೋಂಕಿತ ಮೈಸೂರಿನಲ್ಲಿ ಸಾವು - Kollegal covid death news
ಕೊರೊನಾ ವೈರಸ್ ಗೆ ಇಂದು ಕೊಳ್ಳೇಗಾಲದ ಆರೋಗ್ಯ ಇಲಾಖೆಯ ನಿವೃತ್ತ ಅಧೀಕ್ಷಕರೊಬ್ಬರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
Died
ಮೃತರು ಕೊಳ್ಳೇಗಾಲ ಪಟ್ಟಣದ ದೇವಾಂಗಪೇಟೆಯ 65 ವರ್ಷದ ವ್ಯಕ್ತಿಯಾಗಿದ್ದು, ಇವರು ಆರೋಗ್ಯ ಇಲಾಖೆಯ ನಿವೃತ್ತ ಅಧೀಕ್ಷಕನಾಗಿದ್ದಾರೆ. ಇವರಿಗೆ 4 ದಿನದ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆ ತಾಲೂಕು ಆಡಳಿತ ದೇವಾಂಗಪೇಟೆ ಬಡಾವಣೆಯನ್ನು ಸೀಲ್ ಡೌನ್ ಮಾಡಿತ್ತು. ಜೊತೆಗೆ ಸೋಂಕಿತನನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಅದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ನಿನ್ನೆ ಕೊಳ್ಳೇಗಾಲ ಸಮೀಪದ ಕಾಮಗೆರೆ ಗ್ರಾಮದ ವೃದ್ಧನೋರ್ವ ಕೊರೊನಾಗೆ ಬಲಿಯಾಗಿದ್ದರು.