ಚಾಮರಾಜನಗರ: ಕೊರೊನಾ ಮಹಾಮಾರಿ ಹಿನ್ನೆಲೆ ಲಾಕ್ ಡೌನ್ ಆದೇಶ ಜಾರಿಗೊಳಿಸಿದ್ದು ಕೊಳ್ಳೇಗಾಲದಲ್ಲಿ ಮಾತ್ರ ಜನರು ಯಾವುದೇ ಚಿಂತೆಯಿಲ್ಲದೆ ಓಡಾಡುತ್ತಿರುವುದು ಕಂಡುಬಂದಿತು.
ರಾಜರೋಷವಾಗಿ ಓಡಾಡುತ್ತಿರುವ ಜನ: ಲಾಕ್ಡೌನ್ಗಿಲ್ಲ ಕೊಳ್ಳೇಗಾಲದಲ್ಲಿ ಕಿಮ್ಮತ್ತು - ಲಾಕ್ಡೌನ್ಗಿಲ್ಲ ಕೊಳ್ಳೇಗಾಲದಲ್ಲಿ ಕಿಮ್ಮತ್ತು
ದಿನದಿಂದ ದಿನಕ್ಕೆ ಕೋವಿಡ್-19 ಹಾವಳಿ ಹೆಚ್ಚಾಗುತ್ತಿದ್ದು ಲಾಕ್ ಡೌನ್ ಆದೇಶ ಜಾರಿಗೊಳಿಸಲಾಗದೆ. ಆದ್ರೆ ಕೊಳ್ಳೇಗಾಲದ ಜನ ಮಾತ್ರ ಕೊರೊನಾ ಭಯವಿಲ್ಲದೆ ಅನಗತ್ಯವಾಗಿ ಹೊರಗಡೆ ಓಡಾಡುತ್ತಿರುವ ದೃಶ್ಯ ಕಂಡುಬಂದಿತು.
ಲಾಕ್ ಡೌನ್ ಆದೇಶ ಉಲ್ಲಂಘನೆ ಮಾಡುತ್ತಿರುವ ಜನ
ಬೆಳಗ್ಗೆ 10 ರವರೆಗೆ ಸಾಮಾನ್ಯವಾಗಿ ಜನ ಸಂಚಾರ ಹೆಚ್ಚಿದ್ದು, ಮಧ್ಯಾಹ್ನ ಸಹ ಅನಗತ್ಯವಾಗಿ ಅಂಗಡಿಗಳ ಮುಂದೆ ಕುಳಿತು ಹರಟೆ ಹೊಡೆಯುತ್ತಿರುವುದು ಅಲ್ಲಲ್ಲಿ ಕಂಡುಬಂದಿತು. ಅಗತ್ಯ ವಸ್ತುಗಳು, ಬ್ಯಾಂಕ್ ಸೇರಿದಂತೆ ತುರ್ತು ಸೇವೆ ಪಡೆಯಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ ಜನರು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಟೀ ಸೇವನೆ, ಸಿಗರೇಟ್ ಸೇದುವುದು ಮುಂದುವರೆಯುತ್ತಿದೆ. ಜೊತೆಗೆ ಕೆಲ ಪೋಕರಿಗಳು ವೇಗವಾಗಿ ಬೈಕ್ ಚಲಾಯಿಸುತ್ತಿದ್ದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
TAGGED:
Kollegal lockdown news